ADVERTISEMENT

ಹಿಪ್ಪುನೇರಳೆ: ರೋಗ ನಿಯಂತ್ರಣ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 2:44 IST
Last Updated 4 ಆಗಸ್ಟ್ 2025, 2:44 IST
ರಾಮನಗರ ತಾಲ್ಲೂಕಿನ ತಿಮ್ಮೇಗೌಡನದೊಡ್ಡಿಯಲ್ಲಿ ಹಿಪ್ಪುನೇರಳೆಯ ನುಸಿರೋಗ ಮತ್ತು ಎಲೆಸುರುಳಿ ರೋಗ ನಿಯಂತ್ರಣ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳು ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು
ರಾಮನಗರ ತಾಲ್ಲೂಕಿನ ತಿಮ್ಮೇಗೌಡನದೊಡ್ಡಿಯಲ್ಲಿ ಹಿಪ್ಪುನೇರಳೆಯ ನುಸಿರೋಗ ಮತ್ತು ಎಲೆಸುರುಳಿ ರೋಗ ನಿಯಂತ್ರಣ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳು ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು   

ರಾಮನಗರ: ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಿಪ್ಪುನೇರಳೆ ಬೆಳೆಯಲ್ಲಿ ಕಾಣಿಸಿಕೊಂಡಿರುವ ನುಸಿರೋಗ ಮತ್ತು ಎಲೆಸುರುಳಿ ರೋಗ ನಿಯಂತ್ರಣ ಕುರಿತ ಜಾಗೃತಿ ಕಾರ್ಯಕ್ರಮ ತಾಲ್ಲೂಕಿನ ತಿಮ್ಮೇಗೌಡನದೊಡ್ಡಿ ಗ್ರಾಮದ ರೈತರ ತೋಟದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಜರುಗಿತು. 

ಲಕ್ಷ್ಮೀಪುರದ ತಾಂತ್ರಿಕ ಸೇವಾ ಕೇಂದ್ರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ, ಸಹಾಯ ನಿರ್ದೇಶಕರಾದ ಎಂ.ಪಿ. ಉಮೇಶ್, ವಿಜ್ಞಾನಿಗಳಾದ ಡಾ. ಮಧುಸೂದನ್, ಲಕ್ಷ್ಮೀಪುರ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಗೋಪಾಲ್ ಭಾಗವಹಿಸಿದ್ದರು. ಅಧಿಕಾರಿಗಳು ರೋಗ ನಿಯಂತ್ರಣ ಔಷಧವನ್ನು ಸಿಂಪಡಿಸುವ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.

ನುಸಿರೋಗ ಮತ್ತು ಎಲೆಸುರುಳಿ ರೋಗ ನಿಯಂತ್ರಣಕ್ಕೆ ವೆಟಬಲ್ ಸಲ್ಫರ್ ಅನ್ನು ಒಂದು ಲೀಟರ್‌ಗೆ 3 ಗ್ರಾಂ, ಬೇವಿನ ಎಣ್ಣೆ ಒಂದು ಲೀಟರ್ ನೀರಿಗೆ 5 ಎಂಎಲ್, ನೀಮ್ ಪೌಂಡರ್ ಹಾಗೂ ಇಂಟರ್‍ಪಿಡ್ಡರ್ ಅದನ್ನು ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ಇದರಿಂದ ರೋಗ ಹತೋಟಿಗೆ ಬಂದು ಉತ್ತಮ ಇಳವರಿ ದೊರೆಯಲಿದೆ ಎಂದು ಅಧಿಕಾರಿಗಳು ಸಲಹೆ ನೀಡಿದರು.

ADVERTISEMENT

ರೋಗ ನಿಯಂತ್ರಣಕ್ಕಾಗಿ ರೈತರು ಔಷಧ ಖರೀದಿಗೂ ಮುನ್ನ ಇಲಾಖೆ ಅಧಿಕಾರಿಗಳ ಸಲಹೆ ಪಡೆಯಬೇಕು. ಮಾರುಕಟ್ಟೆಯಲ್ಲಿ ಸಿಗುವ ಔಷಧವನ್ನು ತಂದು ಅದರ ಬಾಧಕಗಳನ್ನು ಅರಿಯದೆ ಸಿಂಪಡಿಸಿದರೆ ಸಮಸ್ಯೆಯಾಗಲಿದೆ. ಇದರಿಂದ ಬೆಳೆ ಜೊತೆಗೆ ರೈತರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಹಾಗಾಗಿ, ಔಷಧಿ ಸಿಂಪರಣೆ ಕುರಿತು ಇಲಾಖೆ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಹೇಳಿದರು.

ರೇಷ್ಮೆ ಇಲಾಖೆಯಿಂದ ಹಾಗೂ ನರೇಗಾದಡಿ ರೈತರಿಗೆ ಸಿಗುವ ವಿವಿಧ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಅಧಿಕಾರಿಗಳ ತಂಡ ರೈತರಿಗೆ ಮಾಹಿತಿ ನೀಡಿತು. ರೋಗಕ್ಕೆ ಸಂಬಂಧಿಸಿದಂತೆ ರೇಷ್ಮೆ ಬೆಳೆಗಾರರ ತಮಗಿದ್ದ ಗೊಂದಲಗಳನ್ನು ಅಧಿಕಾರಿಗಳ ಬಳಿ ಹೇಳಿಕೊಂಡು ಪರಿಹರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.