ADVERTISEMENT

ಮಾಗಡಿ: ದೇವರಿಗೆ ಅಲಂಕಾರ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 3:44 IST
Last Updated 9 ಆಗಸ್ಟ್ 2021, 3:44 IST
ಮಾಗಡಿಯ ಕರಗದಹಳ್ಳಿ ಕಾಳಘಟ್ಟಮ್ಮ ದೇವಿಗೆ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು
ಮಾಗಡಿಯ ಕರಗದಹಳ್ಳಿ ಕಾಳಘಟ್ಟಮ್ಮ ದೇವಿಗೆ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು   

ಮಾಗಡಿ: ‘ಎಲ್ಲಾ ಆಶ್ರಮಗಳಿಗಿಂತಲೂ ಗೃಹಸ್ಥಾಶ್ರಮವೇ ಶ್ರೇಷ್ಠ. ನಮ್ಮೆಲ್ಲರ ಜೀವನದಲ್ಲಿ ಧನ್ಯತೆ ತಂದುಕೊಡುತ್ತದೆ’ ಎಂದು ಆಗಮಿಕ ವಿದ್ವಾನ್‌ ಕೆ.ಎನ್‌. ಗೋಪಾಲ್‌ ದೀಕ್ಷಿತ್ ತಿಳಿಸಿದರು.

ಪಟ್ಟಣದ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಅಂಗವಾಗಿ ಭಾನುವಾರ ನಡೆದ ವಿಶೇಷ ರುದ್ರಾಭಿಷೇಕ ಹಾಗೂ ಮೃತ್ಯುಂಜಯ ಹೋಮದ ನಂತರ ಭಕ್ತರನ್ನು ಕುರಿತು ಅವರು ಮಾತನಾಡಿದರು.

ದಾಂಪತ್ಯದ ಹಿರಿಮೆ, ಗೃಹಸ್ಥಾಶ್ರಮದ ಗರಿಮೆಯನ್ನು ಎತ್ತಿ ಹಿಡಿಯುವ ವ್ರತಗಳಲ್ಲಿ ಜ್ಯೋತಿರ್ಭೀಮೇಶ್ವರ ವ್ರತ ಬಹುಮುಖ್ಯವಾದುದು. ಇದು ಭೀಮನ ಅಮಾವಾಸ್ಯೆ ಎಂದೇ ಹೆಸರಾಗಿದೆ. ನಮ್ಮ ಸಂಸ್ಕೃತಿಯ ವಿಶೇಷವೆಂದರೆ ಕುಟುಂಬ ವ್ಯವಸ್ಥೆ ಬಗ್ಗೆ ನಮಗಿರುವ ಆದರ್ಶ. ಕುಟುಂಬ ಎಂಬ ನಿಲುವು ನಮ್ಮದು. ನಮ್ಮೆಲ್ಲರ ಜೀವನ ಸಂತೋಷವಾಗಿರಬೇಕು ಎಂದರೆ ಕುಟುಂಬ, ಸಮಾಜವೂ ಚೆನ್ನಾಗಿರಬೇಕು ಎಂದರು.

ADVERTISEMENT

ಅರ್ಚಕ ಕಿರಣ್‌ ದೀಕ್ಷಿತ್‌, ಪುರುಷೋತ್ತಮ್‌ ಪಟೇಲ್‌ ಕುಟುಂಬದವರು ಹಾಗೂ ಭಕ್ತರು ಸಾಲಾಗಿ ಬಂದು ದೇವರ ದರ್ಶನ ಪಡೆದರು.

ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ, ತಿರುಮಲೆ ಮುಳಕಟ್ಟಮ್ಮ ದೇವಿ, ಕೋಟೆ ಮಾರಮ್ಮದೇವಿ, ಕೋಟೆ ಚಾಮುಂಡೇಶ್ವರಿ ದೇವಿ, ಕಾಳಿಕಾಂಬ ಮಾತೆ, ಕಲ್ಯಾಬಾಗಿಲು ಸಾರ್ವಜನಿಕರ ವಿನಾಯಕ ಸ್ವಾಮಿ, ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ, ದೇವರಹಟ್ಟಿ ಲಕ್ಷ್ಮೀನರಸಿಂಹಸ್ವಾಮಿ, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ, ನೇರಳೆಕೆರೆ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ವಿಶೇಷ ಪೂಜೆ ನಡೆಯಿತು.

ಬೈಚಾಪುರದ ಕಾಳಘಟ್ಟಮ್ಮದೇವಿ, ಕಲ್ಲೂರಿನ ವರದಾಂಜನೇಯ ಸ್ವಾಮಿ, ಮೋಟಗೊಂಡನಹಳ್ಳಿ ಚಂದ್ರಮೌಳೇಶ್ವರ ಸ್ವಾಮಿ, ಕೋರಮಂಗಲದ ಚೆನ್ನಿಗರಾಯ ಸ್ವಾಮಿ, ಸೋಲೂರಿನ ರೇಣುಕಾಯಲ್ಲಮ್ಮ ದೇವಿ, ಆಂಜನೇಯಸ್ವಾಮಿ, ತಟ್ಟೆಕೆರೆ ಬೆಟ್ಟದ ರಂಗನಾಥಸ್ವಾಮಿ, ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥ ಸ್ವಾಮಿ, ಕುದೂರಿನ ಲಕ್ಷ್ಮೀದೇವಿ ದೇಗುಲ, ಚೌಡೇಶ್ವರಿ ದೇಗುಲ, ತಿಪ್ಪಸಂದ್ರದ ಈಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು.

ಅಗಲಕೋಟೆ ಸೀತಾ ರಾಮಾಂಜನೇಯ ಸ್ವಾಮಿ, ದೊಡ್ಡಮುದುಗೆರೆ ರಂಗನಾಥ ಸ್ವಾಮಿ, ಕೆಂಚನಹಳ್ಳಿ ಲಕ್ಷ್ಮೀದೇವಿ ಅಮ್ಮನವರ ದೇವಾಲಯ, ಸಾವನದುರ್ಗದ ಸಾವಂದಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿ, ಕರಗದಹಳ್ಳಿ ಕಾಳಘಟ್ಟಮ್ಮ ದೇವಾಲಯ, ಮುಳಕಟ್ಟಮ್ಮನ ಪಾಳ್ಯದ ಮುಳಕಟ್ಟಮ್ಮದೇವಿ, ಶ್ರೀಗಿರಿಪುರದ ಆಂಜನೇಯ ಸ್ವಾಮಿ ಸೇರಿದಂತೆ ವಿವಿಧೆಡೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.