ADVERTISEMENT

ಸದೃಢ ದೇಹಕ್ಕೆ ಕ್ರೀಡೆಯೇ ಸಾಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 13:22 IST
Last Updated 19 ಮಾರ್ಚ್ 2019, 13:22 IST
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೀಜಿನ ವಾರ್ಷಿಕ ಕ್ರೀಡಾ ಉತ್ಸವಕ್ಕೆ ಪ್ರಭಾರ ಪ್ರಾಂಶುಪಾಲ ಪ್ರೊ.ಟಿ.ಎಸ್‌.ತಿಮ್ಮಹನುಮಯ್ಯ ಚಾಲನೆ ನೀಡಿದರು.
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೀಜಿನ ವಾರ್ಷಿಕ ಕ್ರೀಡಾ ಉತ್ಸವಕ್ಕೆ ಪ್ರಭಾರ ಪ್ರಾಂಶುಪಾಲ ಪ್ರೊ.ಟಿ.ಎಸ್‌.ತಿಮ್ಮಹನುಮಯ್ಯ ಚಾಲನೆ ನೀಡಿದರು.   

ಮಾಗಡಿ: ‘ವಿದ್ಯಾರ್ಥಿಗಳು ಸತತವಾಗಿ ಅಭ್ಯಾಸ ಮಾಡುಬೇಕು. ಜತೆಗೆ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಹಾಗಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲುಗೊಳ್ಳಬೇಕು’ ಎಂದು ಪ್ರಭಾರ ಪ್ರಾಂಶುಪಾಲ ಪ್ರೊ.ಟಿ.ಎಸ್‌.ತಿಮ್ಮಹನುಮಯ್ಯ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿ ವಿವಿಧ ಕಾರಣಗಳಿಂದಾಗಿ ಪರಿಸರ, ನೀರು, ಗಾಳಿ, ಆರೋಗ್ಯ ಎಲ್ಲವೂ ಕಲುಷಿತವಾಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ವ್ಯಾಯಾಮ, ಯೋಗಾಸನ, ಧ್ಯಾನ, ಈಜುವುದು ಮತ್ತು ಇತರೆ ಕ್ರೀಡಾ ಅಭ್ಯಾಸಗಳಲ್ಲಿ ನಿರತರಾಗಬೇಕು. ಕೇವಲ ಸಂಪತ್ತಿನ ಸಂಗ್ರಹವೇ ಜೀವನದ ಉದ್ದೇಶವಾಗಬಾರದು. ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ADVERTISEMENT

ದೈಹಿಕ ಶಿಕ್ಷಣ ವಿಭಾಗದ ರಮೇಶ್‌ ಬಾಬು ಮಾತನಾಡಿ ‘ವಿದ್ಯಾರ್ಥಿಗಳು ದೈಹಿಕ ಆರೋಗ್ಯದ ಕಡೆ ಗಮನ ಹರಿಸಬೇಕು. ಅದಕ್ಕಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ’ ಎಂದರು

ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.