ADVERTISEMENT

ಮಂಚನಬೆಲೆ ಡ್ಯಾಂನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 8:17 IST
Last Updated 20 ಜೂನ್ 2025, 8:17 IST

ಮಾಗಡಿ: ಸ್ನೇಹಿತರೊಂದಿಗೆ ಮಂಜನಬೆಲೆ ಡ್ಯಾಂಗೆ ಹೋಗಿದ್ದ ಡಿಪ್ಲೊಮಾ ವಿದ್ಯಾರ್ಥಿ ಡ್ಯಾಂನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಮೃತರು ಬೆಂಗಳೂರಿನ ಸಿ.ವಿ.ರಾಮನ್‌ ನಗರದ ಮುರುಗೇಶಪಾಳ್ಯದ ನಿವಾಸಿ ವಿಕಾಸ್ (19) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ವಿಕಾಸ್, ತನ್ನ ಸ್ನೇಹಿತರಾದ ಸೃಜನ್ ಮತ್ತು ಲೋಕೇಶ್ ಗೌಡ ಅವರೊಂದಿಗೆ ಮಂಚನಬೆಲೆ ಡ್ಯಾಂಗೆ ಹೋಗಿದ್ದು. ನಂತರ ನೀರಿಗಿಳಿದು ಈಜಾಡುವಾಗ ಕೆಲವೇ ನಿಮಿಷಗಳಲ್ಲಿ ವಿಕಾಸ್ ಮುಳುಗಲು ಆರಂಭಿಸಿದ್ದಾನೆ. ಕೂಡಲೇ ಸ್ನೇಹಿತರು ರಕ್ಷಣೆಗೆ ಮುಂದಾಗಿ ವಿಫಲರಾಗಿದ್ದು, ನಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಮತ್ತು ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಡ ರಾತ್ರಿವರೆಗೂ ಹುಡುಕಾಟ ನಡೆಸಿದ್ದು, ನಂತರ ವಿಕಾಸ್ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.