ADVERTISEMENT

ಆರೋಗ್ಯಯುತ ಪಶುಗಳ ಹಾಲು ಡೇರಿಗೆ ಕೊಡಿ 

ಯಂಬರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:29 IST
Last Updated 11 ಸೆಪ್ಟೆಂಬರ್ 2019, 12:29 IST
ವಾರ್ಷಿಕ ಮಹಾ ಸಭೆಯಲ್ಲಿ ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್‌ರನ್ನು ನಿರ್ದೇಶಕರು ಅಭಿನಂದಿಸಿದರು.
ವಾರ್ಷಿಕ ಮಹಾ ಸಭೆಯಲ್ಲಿ ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್‌ರನ್ನು ನಿರ್ದೇಶಕರು ಅಭಿನಂದಿಸಿದರು.   

ದೇವನಹಳ್ಳಿ: ಉತ್ತಮ ಆರೋಗ್ಯಯುತ ಪಶುಗಳಿಂದ ಉತ್ಪಾದನೆಯಾಗುವ ಹಾಲನ್ನುಮಾತ್ರ ಡೇರಿಗೆ ಹಾಕಬೇಕು ಎಂದು ಬಮುಲ್ ನಿರ್ದೇಶಕ ಬಿ.ಶ್ರೀನಿವಾಸ್ ಹೇಳಿದರು.

ಇಲ್ಲಿನ ಯಂಬರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, 'ಕೆಚ್ಚಲು ಬಾವು ಆಗಿರುವ ಹಸುಗಳು ಪರಿಪೂರ್ಣ ಗುಣಮುಖವಾಗಬೇಕು. ಹಣದ ಆಸೆಗಾಗಿ ಕೆಲವು ರೋಗ ಪೀಡಿತ ಕೆಚ್ಚಲಿನಿಂದ ಹಾಲು ತಂದು ಡೇರಿಗೆ ಹಾಕುಕುವುದು ಸಲ್ಲದು. ವಾತಾರಣದಲ್ಲಿ ಏರು ಪೇರು, ಮೇವು ನೀಡುವಲ್ಲಿ ವ್ಯತ್ಯಾಸ, ಪಶು ಕೊಟ್ಟಿಗೆ ಸ್ವಚ್ಛತೆ ಇಲ್ಲದಿರುವುದು, ಕೊಳೆತ ಸೋಪ್ಪು, ತರಕಾರಿ ಹಾಕುವುದು, ದುರ್ವಾಸನೆಯುಳ್ಳ ಕಲ್ಲುಗಚ್ಚು ನೀಡುವುದು, ಪಶುಗಳಿಗೆ ವಿವಿಧ ರೋಗಗಳಿಗೆಕಾರಣವಾಗುತ್ತದೆ. ಮಗುವಿನ ಅರೈಕೆಯಂತೆ ಪಶುಗಳ ಜವಾಬ್ದಾರಿ ಇರಬೇಕು. ಪಶುಗಳನ್ನು ಪಾಲಕರು ನಿರ್ಲಕ್ಷ್ಯ ವಹಿಸಬಾರದು’ ಎಂದು ಹೇಳಿದರು.

ಸಹಕಾರ ಸಂಘದ ಅಧ್ಯಕ್ಷ ಎಸ್.ಮಾರೇಗೌಡ ಮಾತನಾಡಿ, ‘2018–19ನೇ ಸಾಲಿನ ವಾರ್ಷಿಕ ಅವಧಿಯಲ್ಲಿ 72.92 ಲಕ್ಷದ ಹಾಲು ಡೇರಿಗೆ ಸಂಗ್ರಹವಾಗಿದೆ. ಹಾಲಿನ ವಹಿವಾಟಿನಿಂದ ₹ 6.68 ಲಕ್ಷ ವ್ಯಾಪಾರ ಲಾಭ ಬಂದಿದೆ. ₹ 3.98 ಲಕ್ಷ ಖರ್ಚುವೆಚ್ಚ ಕಳೆದು ನಿವ್ವಳ ಲಾಭ ಸಿಕ್ಕಿದೆ. ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡುವಂತೆ ಪಶುಪಾಲಕರಿಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗುತ್ತಿದೆ. ಸಹಕಾರ ಸಂಘ ಪ್ರಗತಿಯತ್ತ ಹೆಜ್ಜೆ ಇಡುತ್ತಿದ್ದು ಇನ್ನುಷ್ಟು ರೈತರು ಪಶು ಪಾಲನೆಗೆ ಮುಂದಾಗುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಸಂಘದ ನಿರ್ದೇಶಕರಾದ ಎನ್.ನಾಗರಾಜಪ್ಪ, ಎಂ.ವಾಸುದೇವ್, ಪಿ.ಮುನಿರಾಜಣ್ಣ, ಎಂ.ಮುನಿರಾಜಣ್ಣ, ಪ್ರೇಮಮ್ಮ, ವಿ.ಎಸ್.ಎಸ್.ಎನ್.ನಿರ್ದೇಶಕ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.