ADVERTISEMENT

ಸಾಂಕೇತಿಕ ಸೂರ್ಯಮಂಡಲೋತ್ಸವ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 5:01 IST
Last Updated 26 ಏಪ್ರಿಲ್ 2021, 5:01 IST
ಮಾಗಡಿ ಪಟ್ಟಣದಲ್ಲಿ ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ಸೂರ್ಯಮಂಡಲೋತ್ಸವ ನಡೆಯಿತು
ಮಾಗಡಿ ಪಟ್ಟಣದಲ್ಲಿ ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ಸೂರ್ಯಮಂಡಲೋತ್ಸವ ನಡೆಯಿತು   

ಮಾಗಡಿ: ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರೆಯು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರದ್ದಾಗಿದೆ. ಆದರೆ, ಸಾಂಪ್ರದಾಯಿಕವಾಗಿ ಪೂಜಾಧಿಗಳು ನಡೆಯಬೇಕು ಎಂಬ ಉದ್ದೇಶದಿಂದ ಭಾನುವಾರ ಬೆಳಿಗ್ಗೆ ದೇವಾಲಯದ ಪೌಳಿಯ ಒಳಗೆ ಸೂರ್ಯಮಂಡಲೋತ್ಸವ ನಡೆಯಿತು ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸ ಪ್ರಸಾದ್‌ ತಿಳಿಸಿದ್ದಾರೆ.

ಸಪ್ತಾಶ್ವಗಳ ಮೇಲೆ ರಥಕ ಅರುಣ, ಅರುಣದೇವನ ಮೇಲೆ ಸೂರ್ಯದೇವರ ಪ್ರಭಾವಳಿ, ಪ್ರಭಾವಳಿಯ ಒಳಗೆ ಉಭಯ ಅಮ್ಮನವರ ಸಹಿತ ರಂಗನಾಥಸ್ವಾಮಿ, ಮುತ್ತಿನ ಮಣಿಗಳ ಅಲಂಕಾರ ನೋಡುಗರಲ್ಲಿ ಭಕ್ತಿಯ ಪರವಶತೆ ಮೂಡಿಸುವಂತಿತ್ತು.

ಶೇಷವಾಹನ ಉತ್ಸವ: ರಂಗನಾಥಸ್ವಾಮಿ ಶೇಷವಾಹನ ಉತ್ಸವ ಸಂಜೆ ನಡೆಯಿತು. ಕೋವಿಡ್‌ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ADVERTISEMENT

ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ ಸಾಂಕೇತಿಕವಾಗಿ ಉತ್ಸವ ನಡೆಸಿದರು.ತಿರುವೆಂಗಳನಾಥ ರಂಗನಾಥ ಸ್ವಾಮಿ ಮತ್ತು ಉಭಯ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿಆದಿಶೇಷನ ಆಭರಣ ತೊಡಿಸಲಾಗಿತ್ತು. ಪುಳಿಯೊಗರೆ, ಪಾನಕ ವಿತರಿಸಲಾಯಿತು. ಶೇಷವಾಹನ ಉತ್ಸವ ದೇಗುಲದ ಪೌಳಿಯ ಒಳಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.