ರಾಮನಗರ: ಉತ್ತರಾಖಂಡದ ಡೆಹ್ರಾಡೂನ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 4ನೇ ಕೆಡೆಟ್ ಮತ್ತು ಜೂನಿಯರ್ ರಾಷ್ಟ್ರಮಟ್ಟದ ಟೇಕ್ವಾಂಡೊ ಚಾಂಪಿಯನ್‌ಶಿಪ್–2025 ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ (29 ಕೆ.ಜಿ) ರಾಮನಗರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟು ನಯನಪ್ರಿಯ ಬೆಳ್ಳಿ ಪದಕ ಗಳಿಸಿದ್ದಾರೆ.
ಕರ್ನಾಟಕವನ್ನು ಪ್ರತಿನಿಧಿಸಿದ್ದ ನಯನ ಮೊದಲ ಸುತ್ತಿನಲ್ಲಿ ಬಿಹಾರದ ಸ್ಪರ್ಧಿ ಎದುರು 5 ಅಂಕದಿಂದ, ಎರಡನೇಸುತ್ತಿನಲ್ಲಿ ತೆಲಂಗಾಣದ ಸ್ಪರ್ಧೆ ವಿರುದ್ಧ 4 ಅಂಕಗಳಿಂದ, ಮೂರನೇ ಸುತ್ತಿನಲ್ಲಿ ದೆಹಲಿ ವಿರುದ್ಧ 4 ಅಂಕಗಳಿಂದ ಹಾಗೂ ಅಂತಿಮ 5ನೇ ಸುತ್ತಿನಲ್ಲ ಗುಜರಾತ್ ವಿರುದ್ಧ 14 ಅಂಕಗಳಿಂದ ಜಯ ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಗೋವಿಂದ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.