ADVERTISEMENT

ಹುಂಡಿ ಕಳ್ಳತನ: ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 6:13 IST
Last Updated 2 ನವೆಂಬರ್ 2022, 6:13 IST
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೊಲೀಸರು ಬಂಧಿಸಿರುವ ಆರೋಪಿಗಳು
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೊಲೀಸರು ಬಂಧಿಸಿರುವ ಆರೋಪಿಗಳು   

ಚನ್ನಪಟ್ಟಣ: ದೇವಾಲಯಗಳಲ್ಲಿ ಸರಣಿ ಕಳವು ಹಾಗೂ ರೈತರ ಪಂಪ್ ಸೆಟ್ ಕೇಬಲ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಅಕ್ಕೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ರಾಮನಗರ ತಾಲ್ಲೂಕಿನ ಕೋನಮುದ್ದನಹಳ್ಳಿ ಗ್ರಾಮದ ಕುಮಾರ, ಮಂಡ್ಯ ಜಿಲ್ಲೆಯ ಸಿದ್ದಯ್ಯನಕೊಪ್ಪಲು ಗ್ರಾಮದ ಸಿದ್ದರಾಮು, ಪುಟ್ಟಸ್ವಾಮಿ, ಸುರೇಶ್ ಬಂಧಿತರು.

ಕೆಲವು ದಿನಗಳ ಹಿಂದೆ ಆರೋಪಿಗಳು ತಾಲ್ಲೂಕಿನ ಬೈರಶೆಟ್ಟಿಹಳ್ಳಿ ಗ್ರಾಮದ ಅಂಜನೇಯಸ್ವಾಮಿ ದೇವಾಲಯ, ಕನ್ನಮ್ಮರಾಯಸ್ವಾಮಿ ದೇವಾಲಯ ಹಾಗೂ ಕೋಣನಮಾರಮ್ಮ ದೇವಾಲಯದ ಬಾಗಿಲು ಮುರಿದು ಹುಂಡಿ ದೋಚಿದ್ದರು. ಅಲ್ಲದೆ ಹನಿಯೂರು ಹಾಗೂ ಬಲ್ಲಾಪಟ್ಟಣ ಗ್ರಾಮಗಳ ತೋಟದಲ್ಲಿ ಪಂಪ್‌ ಸೆಟ್, ಕೇಬಲ್ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಂಧಿತರಿಂದ ₹9 ಸಾವಿರ ನಗದು, 120 ಮೀಟರ್ ಕೇಬಲ್, ಪ್ರಕರಣಕ್ಕೆ ಬಳಸಿದ್ದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.