ಮಾಗಡಿ: ತಾಲ್ಲೂಕಿನ ಮತ್ತಿಕೆರೆ ದಾಖಲೆ ತಿಮ್ಮೇಗೌಡನ ಕಾಡುಗೊಲ್ಲರ ಹಟ್ಟಿ ಮೂಡಲಗಿರಿ ತಿಮ್ಮಪ್ಪ ಮತ್ತು ಜುಂಜಪ್ಪಸ್ವಾಮಿ ದೈವಗಳ ಪ್ರತಿಷ್ಠಾಪನೆ ಹಾಗೂ ಹೊಳೆ ಪೂಜೆ ಉತ್ಸವ ಕೆಂಪಸಾಗರ ಕೆರೆಯಂಗಳದಲ್ಲಿ ಶುಕ್ರವಾರ ನಡೆಯಿತು.
ಜನಪದ ಕಲಾವಿದ ಹಿಂಡಸಗೇರಿ ಗೋವಿಂದಪ್ಪ ತಂಡದವರು ಅಜ್ಜಪ್ಪ, ಜುಂಜಪ್ಪ, ತಿಮ್ಮಪ್ಪ ದೈವಗಳ ಜನಪದ ಕಥನ ಕಾವ್ಯ ಹಾಡಿದರು.
ಶನಿವರ ಬೆಳಿಗ್ಗೆ ದೈವಗಳಿಗೆ ಅಭಿಷೇಕ ಮಾಡಿ ಪೂಜಿಸಿ ಕೆರೆಯಂಗಳದಲ್ಲಿ ದಾಸೋಹ ನಡೆಸಲಾಯಿತು. ಶನಿವಾರ ಸಂಜೆ ದೈವಗಳಿಗೆ ಮಣೇವು ಹಾಕಲಾಯಿತು. ಗೋಧೂಳಿ ಸಮಯದಲ್ಲಿ ಕಾಡುಗೊಲ್ಲರ ಬುಡಕಟ್ಟು ಜನಪದ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಹೊಳೆ ಉತ್ಸವ ನಡೆಯಿತು.
ಅರುವನಹಳ್ಳಿ ಪಟ್ಟದ ಪೂಜಾರಿ ನಾಗರಾಜು, ಬಾಚಹಳ್ಳಿ ಹಟ್ಟಿ ಮೂಡಲಗಿರಿ, ಕಬ್ಬಾಳು ಗೊಲ್ಲರ ಹಟ್ಟಿ ಗಿರೀಶ್, ತಟವಾಳ್ ದಾಖಲೆ ಕಾಡುಗೊಲ್ಲರ ಹಟ್ಟಿ ಅಜ್ಜಪ್ಪಸ್ವಾಮಿ ದೇವಾಲಯದ ಪಟ್ಟದ ಪೂಜಾರಿ ಚಿತ್ತಯ್ಯ,ನಡೆಮಾವಿನ ಪುರದ ರಾಜಣ್ಣ, ಬೆಂಗಳೂರು ತಿಮ್ಮಪ್ಪಸ್ವಾಮಿ ಪೂಜಾರಿ ಚಿಕ್ಕಣ್ಣ, ಪೂಜಾರಿ ಕುಮಾರ್, ತಿಮ್ಮೇಗೌಡನ ಕಾಡುಗೊಲ್ಲರ ಹಟ್ಟಿ ಪೂಜಾರಿ ಸುರೇಶ್, ಗಂಗ ಮಾರಯ್ಯ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.