ADVERTISEMENT

ಅಪಘಾತ | ಕೆಎಸ್‌ಆರ್‌ಟಿಸಿ ಬಸ್–ಇನೋವಾ ಕಾರ್ ಅಪಘಾತ; ಉಡುಪಿ‌ಯ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 7 ಮೇ 2022, 4:37 IST
Last Updated 7 ಮೇ 2022, 4:37 IST
   

ರಾಮನಗರ: ಕನಕಪುರ ತಾಲ್ಲೂಕಿನ ಕೆಮ್ಮಾಳೆದೊಡ್ಡಿ ಬಳಿ ಶನಿವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್ ಹಾಗೂಇನೋವಾ ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಉಡುಪಿ ಜಿಲ್ಲೆಯ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಕ್ಷತಾ, ಅವರ ಆರು ತಿಂಗಳ‌ ಮಗು ಸುಮಂತ್ ಹಾಗೂ ಕಾರ್ ಚಾಲಕ ಉಮೇಶ್ ಸಾವನ್ನಪ್ಪಿದವರು. ಅಪಘಾತದ ತೀವ್ರತೆಗೆ ಮಗುವಿನ ದೇಹ ಛಿದ್ರವಾಗಿದೆ. ಮತ್ತಿಬ್ಬರಿಗೆ ಗಾಯಗಳಾಗಿದ್ದು, ಕನಕಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT