
ಕನಕಪುರ: ತಾಲ್ಲೂಕಿನ ತುಂಗಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕುರಿಗೌಡನದೊಡ್ಡಿ ಕೆ.ಎಂ. ರಾಜು ಮತ್ತು ಉಪಾಧ್ಯಕ್ಷರಾಗಿ ವರಗೇರಹಳ್ಳಿ ನಾಗಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಸಹಕಾರ ಇಲಾಖೆಯ ಮಹಮ್ಮದ್ ನದೀಂ ಚುನಾವಣೆ ನಡೆಸಿದರು. ಈ ಇಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ.ಪಿ. ಚಂದ್ರ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನಿರ್ದೇಶಕರಾದ ಟಿ.ಸಿ. ದುರ್ಗೇಗೌಡ, ಚಿಕ್ಕರಾಜು, ಮುದ್ದೇಗೌಡ, ಕೆಂಪನಂಜಯ್ಯ, ಶ್ರೀನಿವಾಸ್, ಶೇಖರ್ ಬಿ.ಎಸ್., ಮರಿಯಪ್ಪ ಆರ್.ಸಿ., ಶಿವರಾಮು, ಪುಟ್ಟ ತಾಯಮ್ಮ, ಮುತ್ತಯ್ಯ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮುಖಂಡರಾದ ರಾಯಸಂದ್ರ ರವಿ, ಶಿವನಂಜಯ್ಯ, ರಾಜಶೇಖರ್, ಕುಮಾರ್, ರಾಜಗೋಪಾಲ್ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.