ADVERTISEMENT

ಸೆ.29ರಂದು ಮತದಾನ, ಅಂದೇ ಫಲಿತಾಂಶ

ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:41 IST
Last Updated 20 ಸೆಪ್ಟೆಂಬರ್ 2019, 5:41 IST
ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೊನ್ನಿಗನಹಳ್ಳಿ ಎಚ್‌.ಎಚ್‌.ಜಗನ್ನಾಥ್‌ ನಾಮಪತ್ರ ಸಲ್ಲಿಸಿದರು
ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೊನ್ನಿಗನಹಳ್ಳಿ ಎಚ್‌.ಎಚ್‌.ಜಗನ್ನಾಥ್‌ ನಾಮಪತ್ರ ಸಲ್ಲಿಸಿದರು   

ಕನಕಪುರ: ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವಚುನಾವಣೆಗೆ ಗುರುವಾರ 5 ನಾಮಪತ್ರ ಸಲ್ಲಿಕೆಯಾದವು.

ಮಹಾಸಭಾದ ತಾಲ್ಲೂಕು ಘಟಕ ಮತ್ತು ಜಿಲ್ಲಾ ಘಟಕದ ಚುನಾವಣೆ ಪ್ರಾರಂಭವಾಗಿದ್ದು ನಾಮಪತ್ರ ಸಲ್ಲಿಕೆಗೆ ಸೆ.14ರಿಂದ ಅವಕಾಶ ಕೊಡಲಾಗಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ 7 ಮಂದಿ ಅರ್ಜಿ ಪಡೆದಿದ್ದರು.

ಸೆ.19ರ ತನಕ ಯಾವುದೆ ಅರ್ಜಿಗಳು ಸಲ್ಲಿಕೆಯಾಗಿರಲಿಲ್ಲ. ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸೆ.19ರಂದು 5 ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದರು.

ADVERTISEMENT

ಕಾರ್ಯಕಾರಿ ಸಮಿತಿಗೆ ಒಟ್ಟು 20 ಸ್ಥಾನಗಳಿದ್ದು ಅದರಲ್ಲಿ 13 ಪುರುಷರು, 7 ಮಹಿಳೆಯರಿಗೆ ಮೀಸಲಾಗಿದೆ. 13ಪುರುಷ ಸ್ಥಾನಗಳಿಗೆ 19 ನಾಮಪತ್ರ ಸಲ್ಲಿಕೆಯಾಗಿವೆ. ಮಹಿಳಾ ಮೀಸಲು ಸ್ಥಾನಕ್ಕೆ 2 ಅರ್ಜಿ ಮಾತ್ರ ಸಲ್ಲಿಕೆಯಾಗಿವೆ.

ಚುನಾವಣಾಧಿಕಾರಿಯಾಗಿ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನಪ್ಪ, ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಆರ್‌.ಚಂದ್ರಶೇಖಯ್ಯ ನೇಮಕಗೊಂಡಿದ್ದು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಚುನಾವಣಾ ಪ್ರಕ್ರಿಯೆ ಇಲ್ಲಿನ ದೇಗುಲಮಠದ ಆವರಣದಲ್ಲಿ ನಡೆಯುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಹೊನ್ನಿಗನಹಳ್ಳಿಯ ಎಚ್‌.ಎಸ್‌.ಜಗನ್ನಾಥ್‌, ಹುಣಸನಹಳ್ಳಿಯ ಎಚ್.ಕೆ.ಸಾಂಭಶಿವನ್‌, ಕನಕಪುರದ ಕೈಲಾಸ್‌ ಶಂಕರ್‌, ದರ್ಶನ್‌.ಎಂ.ಬಿ, ಕೆ.ಆರ್‌.ಸುರೇಶ್‌ ನಾಮಪತ್ರ ಸಲ್ಲಿಸಿದ್ದಾರೆ.

ದೇವರಾಜು (ಜ.ಜಿ), ಭೂಹಳ್ಳಿ ಉಮೇಶ್‌, ಮೋಹನ್‌ ಕುಮಾರ್‌ ಕೆ.ವಿ, ರಮೇಶ್‌, ನಟರಾಜು, ಭೂಹಳ್ಳಿ ತೋಟದಪ್ಪ, ಮಹದೇವಪ್ಪ, ಗಣೇಶ್‌, ದಾಳಿಂಬ ಬಸಪ್ಪ, ರುದ್ರೇಶ್‌, ಎಸ್‌.ಕೆಂಪಮಾದಯ್ಯ, ನಿರಂಜನ, ಜಯಸ್ವಾಮಿ, ಕೆ.ಆರ್‌.ಮಹದೇವಯ್ಯ, ಸೋಮಣ್ಣ, ಕೇಬಲ್‌ ಸುರೇಶ್‌, ಉಮಾಶಂಕರ್‌, ರಾಜೇಂದ್ರ, ಪರಮೇಶ್‌, ಜಯಸ್ವಾಮಿ, ‍ ಶಶಿಧರ್‌ ನಾಮಪತ್ರ ಸಲ್ಲಿಕೆಯಲ್ಲಿ ಉಪಸ್ಥಿತರಿದ್ದರು.

ಚುನಾವಣೆ ಪ್ರಕ್ರಿಯೆ: ತಾಲ್ಲೂಕಿನಲ್ಲಿ ಒಟ್ಟು 578 ಮತದಾರರಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸೆ.19 ಕೊನೆಯ ದಿನ. ಸೆ.20 ನಾಮಪತ್ರ ಪರಿಶೀಲನೆ. ಸೆ.23 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಸೆ.29 ಮತದಾನ ನಡೆಯಲಿದ್ದು ಅಂದೇ ಚುನಾವಣೆ ನಂತರ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟ ಮಾಡುವುದಾಗಿ ಚುನಾವಣಾಧಿಕಾರಿ ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.