ADVERTISEMENT

ಕನಕಪುರ | ಮಹಿಳೆ ಸ್ನಾನದ ವಿಡಿಯೊ ಪ್ರಕರಣ: ಮನೆ ಮಾಲೀಕನ ಬಂಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 17:08 IST
Last Updated 22 ಆಗಸ್ಟ್ 2023, 17:08 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಕನಕಪುರ (ರಾಮನಗರ): ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ಕದ್ದು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಸ್ನಾನ ಮಾಡುವುದನ್ನು ಮನೆಯ ಮಾಲೀಕ ಧನರಾಜ್ (28) ಎಂಬಾತ ಕಿಟಕಿಯ ಮೂಲಕ ಕದ್ದು ವಿಡಿಯೊ ಮಾಡಿದ್ದ. ಇದನ್ನು ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದ

ಮನೆ ಮಾಲೀಕನ ವಿರುದ್ಧ ಸಂತ್ರಸ್ತ ಮಹಿಳೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆರೋಪಿಯ ಮನೆಗೆ ತೆರಳಿ ಮೊಬೈಲ್‌ ವಶಕ್ಕೆ ಪಡೆಯಲು ಮುಂದಾದಾಗ ಆರೋಪಿಯ ತಾಯಿ ಹುಚ್ಚಮ್ಮ ಮತ್ತು ಸಂಬಂಧಿ ಕೃಷ್ಣಕುಮಾರಿ ಈ ಮೊಬೈಲ್‌ ನಾಶಗೊಳಿಸಿದ್ದಾರೆ.     

ADVERTISEMENT

ತನಿಖೆಗೆ ಅಡ್ಡಿಪಡ್ಡಿಸಿದ ಆರೋಪದ ಮೇಲೆ ಈ ಇಬ್ಬರನ್ನೂ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಧನರಾಜ್‌ ಜೊತೆಯಲ್ಲಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.