ADVERTISEMENT

ವಂಡರ್‌ಲಾ: ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಉಚಿತ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 14:04 IST
Last Updated 29 ಜುಲೈ 2024, 14:04 IST
ವಂಡರ್‌ಲಾ
ವಂಡರ್‌ಲಾ   

ರಾಮನಗರ: ಸ್ನೇಹಿತರ ದಿನಾಚರಣೆ ಅಂಗವಾಗಿ ಆಗಸ್ಟ್ 4ರಂದು ವಂಡರ್‌ಲಾ ಹಾಲಿಡೇಸ್ ಅಮ್ಯೂಸ್‌ಮೆಂಟ್ ಪಾರ್ಕ್‌ ವಿಶೇಷ ಕೊಡುಗೆ ಘೋಷಿಸಿದೆ. ಅಂದು ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ. ಈ ಕೊಡುಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಮಾತ್ರ ಅನ್ವಯವಾಗಲಿದೆ.

‘ಸ್ನೇಹಿತರ ದಿನವನ್ನು ವಿಶೇಷಗೊಳಿಸಲು ಈ ಕೊಡುಗೆ ಘೋಷಿಸಲಾಗಿದೆ. ಲೈವ್ ಡಿಜೆ, ವಿಶೇಷ ಸಂಜೆ ಜುಂಬಾ ಸೆಷನ್‌, ಮೋಜಿನ ಆಟಗಳು, ಬಹುಮಾನ, ರೋಮಾಂಚಕ ಪಾರ್ಕ್ ರೈಡ್‌ಗಳು ಸೇರಿದಂತೆ ಮನರಂಜನೆಗಳು ಈ ಕೊಡುಗೆಯೊಂದಿಗೆ ಸಿಗಲಿದೆ. ಸ್ನೇಹಿತರೊಂದಿಗೆ ಮೋಜು–ಮಸ್ತಿ ಮಾಡಲು ಎಲ್ಲಾ ಉದ್ಯಾನವನಗಳು ವಿಸ್ತೃತ ಅವಧಿಯವರೆಗೆ ತೆರೆದಿರಲಿವೆ. ಹೀಗಾಗಿ ಸಂಜೆಯ ಹೆಚ್ಚುವರಿ ಸಮಯವನ್ನು ವಂಡರ್‌ಲಾದಲ್ಲಿ ಕಳೆಯಬಹುದು’ ಎಂದು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ತಿಳಿಸಿದ್ದಾರೆ.

ಕೊಡುಗೆಯಡಿ ಟಿಕೆಟ್ ಕಾಯ್ದಿರಿಸಲು ಆನ್‌ಲೈನ್ ಪೋರ್ಟಲ್ https://bookings.wonderla.com/ಗೆ ಭೇಟಿ ನೀಡಬೇಕು. ಇಲ್ಲದಿದ್ದರೆ, ಗ್ರಾಹಕರು ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ ಖರೀದಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ: +91 8037230333 ಮತ್ತು +91 8035073966 ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.