ADVERTISEMENT

ರಾಮನಗರ | ಅ.15ಕ್ಕೆ ಜಿಲ್ಲಾ ಮಟ್ಟದ ಯುವ ಜನೋತ್ಸವ

ವಿವಿಧ ಸ್ಪರ್ಧೆಗಳಿಗೆ ನೋಂದಣಿ ಮಾಡಿಕೊಳ್ಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 2:00 IST
Last Updated 10 ಅಕ್ಟೋಬರ್ 2025, 2:00 IST
   

ರಾಮನಗರ: ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಯುವಜನೋತ್ಸವ ಕಾರ್ಯಕ್ರಮವನ್ನು ಅ. 15ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಆಸಕ್ತರು ನೋಂದಣಿ ಮಾಡಿಕೊಳ್ಳಬೇಕು.

ಜನಪದ ನೃತ್ಯ: (ತಂಡ) (ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ (ಕ್ಯಾಸೆಟ್, ಪೆನ್‌ ಡ್ರೈವ್ ಹಾಗೂ ಸಿ.ಡಿ ಹಾಡುಗಳಿಗೆ ಅವಕಾಶವಿರುವುದಿಲ್ಲ) ಪ್ರಸ್ತುತಪಡಿಸಬೇಕು.

ಜನಪದ ಗೀತೆ: (ತಂಡ)-(ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ) ಯಾವುದೇ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸುವಂತಿಲ್ಲ. ಹಾಡುಗಳ ಮಿಶ್ರಣಕ್ಕೆ ಅವಕಾಶವಿರುವುದಿಲ್ಲ. ಮೂಲಧಾಟಿಯ ಒಂದು ಹಾಡನ್ನು ಪ್ರಸ್ತುತಪಡಿಸಬೇಕು.

ADVERTISEMENT

ಕವಿತೆ ಬರೆಯುವುದು: (ವೈಯಕ್ತಿಕ) (1000 ಪದಗಳಿಗೆ ಮೀರದಂತೆ) ಕನ್ನಡ (ಪ್ರಾದೇಶಿಕ) ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ).

ಕಥೆ ಬರೆಯುವುದು: (1000 ಪದಗಳಿಗೆ ಮೀರದಂತೆ) ಕನ್ನಡ(ಪ್ರಾದೇಶಿಕ) ಆಂಗ್ಲ/ಹಿಂದಿ ಭಾಷೆಯಲ್ಲಿರಬೇಕು. ವಿಷಯವು ಆಕ್ರಮಣಕಾರಿಯಾಗಿರಬಾರದು, ಈಗಾಗಲೇ ಪ್ರಕಟವಾಗಿರಬಾರದು, ಸ್ಪಷ್ಟವಾಗಿರಬೇಕು, ಜಾತಿ/ ಪಂಥ/ ಧರ್ಮ/ ವರ್ಣ/ ಜನಾಂಗವನ್ನು ಒಳಗೊಂಡಿರಬಾರದು ಹಾಗೂ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು.

ಚಿತ್ರಕಲೆ: ಪೋಸ್ಟರ್ ಎ3 ಅಳತೆಯ ಶೀಟ್‌ನಲ್ಲಿ ಚಿತ್ರಕಲೆಯನ್ನು ಶೀರ್ಷಿಕೆ ಸಮೇತ ನೀಡಬೇಕು.

ಘೋಷಣೆ: ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿರಬೇಕು. ಸ್ಪರ್ಧಿಗಳು ಸಿದ್ದಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ 7 ನಿಮಿಷಗಳ ಭಾಷಣವನ್ನು ‘ಭಾರತದಲ್ಲಿ ತುರ್ತು ಪರಿಸ್ಥಿತಿಯ ಅವಧಿ’, ‘ಸಂವಿಧಾನದ ಉಲ್ಲಂಘನೆಯಾಗದಂತೆ ಪ್ರಜಾಪ್ರಭುತ್ವ ಕಾಪಾಡುವುದು’, ‘ಪ್ರಜಾಸತ್ತಾತ್ಮಕ ಮೌಲ್ಯಗಳು’ ವಿಷಯ ಕುರಿತು ಮಾಡಬೇಕು.

ವಿಷಯಾಧಾರಿತ ಸ್ಪರ್ಧೆಗಳು: ಪ್ರದರ್ಶನ (ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ವಿಷಯ). ರಾಜ್ಯ ಮಟ್ಟದವರೆಗೆ ಮಾತ್ರ ಆಯೋಜಿಸಲಾಗುವುದು.

ಜಿಲ್ಲೆಯ 15ರಿಂದ 29 ವರ್ಷದೊಳಗಿನ ಯುವಕ/ಯುವತಿಯರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಅ. 14ರ ಸಂಜೆ 5.30ರೊಳಗೆ ತಮ್ಮ ಹೆಸರುಗಳನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ಈ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಯುವಕ/ಯುವತಿಯರು ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಬ್ಯಾಂಕ್ ಖಾತೆ ವರದಿಯ ಜೆರಾಕ್ಸ್ ಪ್ರತಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇವರನ್ನು ಖುದ್ದಾಗಿ ಅಥವಾ ಕಚೇರಿ ಅಧೀಕ್ಷಕರು, ದೂ. ಸಂಖ್ಯೆ: 7338149456, 9448153308 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.