ADVERTISEMENT

ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹ: ಇದು, ‘ಹೌಡಿ@ಎಚ್‌ಎನ್‌ ಹಳ್ಳಿ’!

ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 20:15 IST
Last Updated 29 ಸೆಪ್ಟೆಂಬರ್ 2019, 20:15 IST
ರಸ್ತೆ ದುರಸ್ತಿಗೆ ಒತ್ತಾಯಿಸಿ ಹಾಲನಾಯಕನಹಳ್ಳಿಯಲ್ಲಿ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು
ರಸ್ತೆ ದುರಸ್ತಿಗೆ ಒತ್ತಾಯಿಸಿ ಹಾಲನಾಯಕನಹಳ್ಳಿಯಲ್ಲಿ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು:ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ಒತ್ತಾಯಿಸಿ ಬೆಳ್ಳಂದೂರು ವಾರ್ಡ್‌ನ ಹಾಲನಾಯಕನಹಳ್ಳಿ ನಿವಾಸಿಗಳು ಭಾನುವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

‘ಬೇಕೇ ಬೇಕು, ರಸ್ತೆ ಬೇಕು’, ‘ಮುಂದೆ ಗುಂಡಿಗಳು ಇವೆ’, ‘ಗುಂಡಿಗಳ ಜೊತೆಗೆ ಬದುಕುತ್ತಿದ್ದೇವೆ’ ’ಹೌಡಿ@ಎಚ್‌ಎನ್‌ ಹಳ್ಳಿ’ ಎಂಬಂತಹ ಸಾಲುಗಳಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಪ್ರತಿಭಟನೆಯಲ್ಲಿದ್ದ ಮಕ್ಕಳು, ಮಹಿಳೆಯರು ಮತ್ತು ನಾಗರಿಕರು ಜಲಮಂಡಳಿ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬಿಬಿಎಂಪಿ ಕಾಣೆಯಾಗಿದೆ, ಓಂ ನಮಃ ಶಿವಾಯ’ ಎಂದು ವ್ಯಂಗ್ಯ ಮಾಡುವ ಮೂಲಕವೇ ಅಸಮಾಧಾನ ಹೊರ ಹಾಕಿದರು. ರಸ್ತೆ ದುರಸ್ತಿಗೊಳಿಸದಿದ್ದರೆ ತೆರಿಗೆ ಕಟ್ಟುವುದಿಲ್ಲ ಎಂದೂ ನಿವಾಸಿಗಳು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.