ಶಿವಮೊಗ್ಗ: ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ನಿರ್ದೇಶಕ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಈ ಹಿಂದಿನ ಆಡಳಿತ ಮಂಡಳಿಯೇ ಪೂರ್ಣ ಗೆಲವು ಸಾಧಿಸಿದೆ.
ಒಟ್ಟು 37 ಮಂದಿ ಅಜೀವ ಸದಸ್ಯರಿದ್ದು, ಇದರಲ್ಲಿ 35 ಮಂದಿ ಮತ ಚಲಾಯಿಸಿದರು. 15 ನಿರ್ದೇಶಕ ಸ್ಥಾನಕ್ಕೆ 21 ಮಂದಿ ಸ್ಪರ್ಧಿಸಿದ್ದರು. ಹಿಂದಿನ ಆಡಳಿತ ಮಂಡಳಿಯ ಗುಂಪಿನ 15 ಮಂದಿ ತಲಾ 30 ಮತಗಳನ್ನು ಪಡೆದರೆ, ಎದುರಾಳಿ ಗುಂಪಿನ ಐದು ಮಂದಿ ತಲಾ 5 ಮತಗಳನ್ನು ಪಡೆದರು.
ನಿರ್ದೇಶಕರಾಗಿ ಎಚ್.ಎನ್. ಮಲ್ಲಪ್ಪ, ಗಿರಿಮಾಜಿ ಆರ್. ರವೀಂದ್ರ, ಎಸ್. ಆರ್ ಸುಶೀಲಮ್ಮ, ಪಿ. ಮೈಲಾರಪ್ಪ, ಜಿ. ಎಸ್. ನಾಗರಾಜ್, ಡಾ.ಪಿ.ನಾರಾಯಣ್, ಎನ್.ಪಿ. ನಾರಾಯಣರಾವ್, ಎಸ್.ವಿ. ತಿಮ್ಮಯ್ಯ, ಜಿ. ನಂಜುಂಡಪ್ಪ, ಕೆ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಡಿ.ಎಚ್. ಶ್ರೀನಿವಾಸ ಮೂರ್ತಿ, ಎಸ್.ಎಲ್. ಶ್ರೀರಂಗರಾಜು, ಜಿ.ಎಸ್. ನಾರಾಯಣರಾವ್, ಎಂ. ಪಿ. ಟೀಕಪ್ಪ ಹೆಗಡೆ, ಅರಕೆರೆ ವಿಶ್ವನಾಥ್ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.