ADVERTISEMENT

ಕುರಿ ಕಾಳಗ: ಭದ್ರಬೀರಾ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 6:40 IST
Last Updated 12 ಮಾರ್ಚ್ 2012, 6:40 IST
ಕುರಿ ಕಾಳಗ: ಭದ್ರಬೀರಾ ಪ್ರಥಮ ಸ್ಥಾನ
ಕುರಿ ಕಾಳಗ: ಭದ್ರಬೀರಾ ಪ್ರಥಮ ಸ್ಥಾನ   

ಶಿವಮೊಗ್ಗ: ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಎದುರಾಳಿಯನ್ನು ಸದೆಬಡಿಯಲು ಎಲ್ಲರೂ ಒಕ್ಕೊರಲಿನಿಂದ ಕೂಗಿ ಕೂಗಿ ಹುರಿದುಂಬಿಸುತ್ತಿದ್ದರು. ಅಭಿಮಾನಿಗಳ ಬೆಂಬಲ, ಪ್ರೋತ್ಸಾಹಕ್ಕೆ ಮತ್ತಷ್ಟು ಬಲಗೊಂಡು ದಂಡೆತ್ತಿ ಬಂದರೆ, ಎದುರಾಳಿಗಳು ಬೆನ್ನು ತೋರಿಸಿ ಓಡಿ ಹೋಗುತ್ತಿದ್ದರು.

-ಇವಿಷ್ಟು ದೃಶ್ಯಗಳು ಕಂಡು ಬಂದಿದ್ದು ನಗರದ ಸೈನ್ಸ್ ಮೈದಾನದಲ್ಲಿ ನಡೆಯುತ್ತಿರುವ ಕುರಿ ಕಾಳಗದಲ್ಲಿ.
ನಗರದ ಮಾರಿಕಾಂಬ ಜಾತ್ರೆ ಅಂಗವಾಗಿ ಕುರಿಕಾಳಗ ಸಮಿತಿ ಹಾಗೂ ಎಸ್.ಎಸ್. ಭರಮಪ್ಪ ಸ್ಮಾರಕದ ಯುವಕರು ಹಮ್ಮಿಕೊಂಡಿದ್ದ, ರಾಜ್ಯಮಟ್ಟದ ಕುರಿ ಕಾಳಗದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ದಾವಣಗೆರೆ, ಹಾವೇರಿ, ಚಿತ್ರದುರ್ಗ, ಗದಗ, ಹೊನ್ನಾಳಿ, ರಾಣೆಬೆನ್ನೂರು, ವಿಜಾಪುರ, ಮೈಸೂರು ಮತ್ತಿತರರ ಭಾಗಗಳಿಂದ ಸುಮಾರು 150 ಕುರಿಗಳು ಕಾಳಗದಲ್ಲಿ ಭಾಗವಹಿಸಿದ್ದವು.

ಎರಡು ಹಲ್ಲಿನ ಕುರಿ ಕಾಳಗದಲ್ಲಿ ನಗರದ `ಭದ್ರಬೀರಾ~ ಕುರಿ ಪ್ರಥಮ ಸ್ಥಾನ ಗಳಿಸಿದರೆ, ನಾಲ್ಕು ಹಲ್ಲಿನ ಕುರಿಕಾಳಗದಲ್ಲಿ ನಗರದ ಸೀಗೆಹಟ್ಟಿ ಮಲ್ಲೆಕ್ ಅವರ `ಹನುಮ ಪ್ರಸನ್ನ~ ಕುರಿ ವಿಜಯ ಸಾಧಿಸಿತು ಹಾಗೂ ಆರು ಹಲ್ಲಿನ ಕಾಳಗದಲ್ಲಿ ಮಾರ್ಸೆಟ್ಟಹಳ್ಳಿಯ `ಗೂಳಿ~ ವಿಜಯದ ಮಾಲೆ ಧರಿಸಿತು ಎಂದು ಸಮಿತಿ ಅಧ್ಯಕ್ಷ ಟಿ. ನಿರಂಜನ ತಿಳಿಸಿದರು.

ಹಿರಿಯ ವಿದ್ಯಾರ್ಥಿಗಳ ಸಭೆ
ಹುಂಚ ಜೈನ ಮಠದ ಆಶ್ರಮ ಜೈನ ವಿದ್ಯಾಪೀಠದ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಮಾರ್ಚ್ 14ರಂದು ಹೊಂಬುಜದಲ್ಲಿ ಹಮ್ಮಿಕೊಂಡಿದ್ದು, ಎಲ್ಲಾ ಹಳೆಯ ವಿದ್ಯಾರ್ಥಿಗಳ ಭಾಗವಹಿಸುವಂತೆ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಪಿ. ಧರಣೇಂದ್ರಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.