ADVERTISEMENT

ಗಾಂಜಾ ಬೆಳೆದ ಅಪರಾಧಿಗೆ 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 6:38 IST
Last Updated 8 ಮಾರ್ಚ್ 2018, 6:38 IST

ಶಿವಮೊಗ್ಗ: ಗಾಂಜಾ ಬೆಳೆದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

2015ರಲ್ಲಿ ಸೊರಬದ ಅಂಕರವಳ್ಳಿ ಗ್ರಾಮದ ನಿವಾಸಿ ರಿಯಾಜ್ ತಮ್ಮ ಮನೆಯ ಹಿಂದೆ ಅಕ್ರಮವಾಗಿ ಗಾಂಜಾ ಬೆಳೆದಿದ್ದ. ಸೊರಬ ಪೊಲೀಸರು ದಾಳಿ ನಡೆಸಿದಾಗ 35 ಗಾಂಜಾ ಗಿಡಗಳು ಪತ್ತೆಯಾಗಿದ್ದವು. ಈ ಕುರಿತು ಪ್ರಕರಣ ದಾಖಲಿಸಿದ್ದರು.

ಸರ್ಕಾರಿ ವಕೀಲ ವಿ.ಬಿ.ಯಳಗೇರಿ ವಾದ ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.