ADVERTISEMENT

ಘಟಿಕೋತ್ಸವ: ಪ್ರಮಾಣಪತ್ರಕ್ಕೆಅರ್ಜಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:59 IST
Last Updated 21 ಡಿಸೆಂಬರ್ 2012, 9:59 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವವು 2013ನೇ ಫೆಬ್ರವರಿಯಲ್ಲಿ ನಡೆಯಲಿದ್ದು, 2012ರ ಜುಲೈವರೆಗೆ ನಿರಂತರ ಮತ್ತು ದೂರಶಿಕ್ಷಣ ವಿಭಾಗದ ಮೂಲಕ ನಡೆದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಪದವಿ ಕೋರ್ಸ್‌ಗಳ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಪದವಿ, ರ‌್ಯಾಂಕ್, ನಗದು ಬಹುಮಾನ, ಪ್ರಮಾಣಪತ್ರಗಳನ್ನು ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ.

ಪ್ರಥಮ ರ‌್ಯಾಂಕ್ ಪಡೆದವರಿಗೆ ಸ್ವರ್ಣ ಪದಕ ಹಾಗೂ ನಗದು ಬಹುಮಾನ ವಿಜೇತರಿಗೆ ಮಾತ್ರ ವೇದಿಕೆಯ ಮೇಲೆ ಪದಕ, ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುವುದು. ಉಳಿದ ಎಲ್ಲ ಸ್ನಾತಕೋತ್ತರ ಪದವೀಧರರಿಗೆ, ಇತರೆ ರ‌್ಯಾಂಕ್ ವಿಜೇತರಿಗೆ ಪದವಿ ರ‌್ಯಾಂಕ್ ಪ್ರಮಾಣಪತ್ರಗಳನ್ನು ಘಟಿಕೋತ್ಸವದ ದಿನದಂದೇ ಘಟಿಕೋತ್ಸವ ಕಚೇರಿಯಲ್ಲಿ ವಿತರಿಸಲಾಗುವುದು.

ಇತರ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರ ಪ್ರಮಾಣಪತ್ರಗಳನ್ನು ಘಟಿಕೋತ್ಸವದ ನಂತರ ಅವರು ವಿದ್ಯಾಭ್ಯಾಸ ಮಾಡಿದ ಕಾಲೇಜು ಅಥವಾ ಸಂಸ್ಥೆಗಳ ಅಧ್ಯಯನ ಕೇಂದ್ರಗಳಿಗೆ ಕಳುಹಿಸಿಕೊಡ ಲಾಗುವುದು. ಅರ್ಹ ಅಭ್ಯರ್ಥಿಗಳು ಆಯಾ ಕಾಲೇಜು ಅಥವಾ ಸಂಬಂಧಿತ ಕೇಂದ್ರಗಳಿಂದ ಪದವಿ ಪ್ರಮಾಣಪತ್ರಗಳನ್ನು ಪಡೆಯಬಹುದು.

ಪ್ರಮಾಣಪತ್ರಗಳನ್ನು ಪಡೆಯುವ ಆಸಕ್ತರು ವೃತ್ತಿಪರ ಹಾಗೂ ವೃತ್ತಿಪರರಲ್ಲದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ 450, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ರೂ 380 ಹಾಗೂ ಪಿ.ಎಚ್‌ಡಿ, ಎಂ.ಫಿಲ್, ಎಂ.ಎಸ್ಸಿ., ತಾಂತ್ರಿಕ ಪದವಿಗಳ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ 1,440, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳು ರೂ 1,270 ಹಾಗೂ ಅನಿವಾಸಿ ಭಾರತೀಯರು ರೂ 2,750 ಡಿಮ್ಯೋಂಡ್ ಡ್ರಾಪ್ಟ್ ಅನ್ನು-  ಹಣಕಾಸು ಅಧಿಕಾರಿಗಳು ಕುವೆಂಪು ವಿಶ್ವವಿದ್ಯಾಲಯ- ಈ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಜ್ಞಾನಸಹ್ಯಾದ್ರಿ ಶಂಕರಘಟ್ಟ - ಇಲ್ಲಿ ಪಾವತಿಯಾಗುವಂತೆ ಪಡೆದು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ 2013ರ ಜನವರಿ 24ರ ಒಳಗೆ ಸಲ್ಲಿಸಬೇಕು.

ವಿಳಂಬ ಶುಲ್ಕ ರೂ 100ರೊಂದಿಗೆ ಜ. 31ರ ಒಳಗೆ ರಿಜಿಸ್ಟ್ರಾರ್, (ಮೌಲ್ಯಮಾಪನ), ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ-577451 ವಿಳಾಸಕ್ಕೆ ಸಲ್ಲಿಸಬಹುದು. ವಿವರಕ್ಕೆ ದೂರವಾಣಿ: 08282- 256166 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.