ADVERTISEMENT

ಜನಪದ ಗೀತೆಗಳಿಗೆ ಹೊಸ ಆಯಾಮ

ವಿಮರ್ಶಕ ಗಿರಡ್ಡಿ ಗೋವಿಂದರಾಜ ಸಂತಾಪ ಸಭೆಯಲ್ಲಿ ಡಾ. ಶ್ರೀಕಂಠ ಕೂಡಿಗೆ

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:33 IST
Last Updated 14 ಮೇ 2018, 8:33 IST

ಶಿವಮೊಗ್ಗ: ‘ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಇಂಗ್ಲಿಷ್‌ ಅಧ್ಯಾಪಕರಾಗಿದ್ದರೂ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ’ ಎಂದು ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶನಿವಾರ ನಡೆದ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.

‘1970ರಿಂದ ಕನ್ನಡ ಸಾಹಿತ್ಯ ಪರಿಷತ್‌ನ ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿ ಕೆಲಸ ಆರಂಭಿಸಿದ ಅವರು ನವ್ಯದ ಬಗ್ಗೆ ಹೆಚ್ಚು ಕೃತಿಗಳನ್ನು ಬರೆದರು. ಉತ್ತಮ ಕವನ, ಕಥೆ ಪುಸ್ತಕಗಳನ್ನು ಬರೆದರು. ಅವರ ‘ವಸ್ತು ಮತ್ತು ತಂತ್ರ’ ಉತ್ತಮ ಪರಾಮರ್ಶೆಯ ಕೃತಿಯಾಗಿದ್ದು, ಜನಪದ ಗೀತೆಗಳಿಗೆ ಹೊಸ ಆಯಮ ನೀಡಿದ ಅವರು ಧಾರವಾಡದ ‘ಸಾಹಿತ್ಯ ಸಂಭ್ರಮ’ದ ರೂವಾರಿಗಳಲ್ಲಿ ಒಬ್ಬರಾಗಿದ್ದರು’ ಎಂದು ವಿವರಿಸಿದರು.

ADVERTISEMENT

‘ಕುವೆಂಪು ಅವರನ್ನು ಕುರಿತು ಹಲವಾರು ಬಿಡಿ ಲೇಖನಗಳನ್ನು ಬರೆದಿದ್ದು, ಅವರ ‘ವಚನ ವಿನ್ಯಾಸ’ ಉತ್ತಮ ಪುಸ್ತಕವಾಗಿದೆ. ಇಲ್ಲಿನ ಕರ್ನಾಟಕ ಸಂಘದ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು’ ಎಂದು ಸ್ಮರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಪ್ರೊ.ಕೆ.ಓಂಕಾರಪ್ಪ, ಪ್ರೊ.ಕಿರಣ್‌ ದೇಸಾಯಿ, ಮಹೇಶ್ವರಮೂರ್ತಿ, ಸುಂದರರಾಜ್, ಮಧುಗಣಪತಿ ಮಡೇನೂರು, ಜಿ.ಪಿ.ಸಂಪತ್ ಕುಮಾರ್, ಹಸನ್ ಬೆಳ್ಳಿಗನೂಡು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.