ADVERTISEMENT

ತಾಲ್ಲೂಕು ಇತಿಹಾಸ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 10:05 IST
Last Updated 24 ಜನವರಿ 2011, 10:05 IST

ಸಾಗರ: ರಾಜ ಮಹಾರಾಜರ ಆಡಳಿತದ ವೈಭವಗಳನ್ನು ಚಿತ್ರಿಸುವುದೇ ಇತಿಹಾಸದ ಉದ್ದೇಶ ಎಂಬ ತಪ್ಪು ಕಲ್ಪನೆ ನಿವಾರಣೆಯಾಗಬೇಕು ಎಂದು ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ.ಇಬ್ರಾಹಿಂ ಬ್ಯಾರಿ ಹೇಳಿದರು.ತಾಲ್ಲೂಕು ಇತಿಹಾಸ ವೇದಿಕೆ ಹಾಗೂ ಸಹೃದಯ ಬಳಗ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಇತಿಹಾಸ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಭವಿಷ್ಯಕ್ಕೆ ಮಾರ್ಗ ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಇತಿಹಾಸವನ್ನು ನೋಡುವ ದೃಷ್ಟಿ ಬೆಳೆಸಿಕೊಳ್ಳುವುದು ಮುಖ್ಯ ಎಂದರು.

ಇಂಗ್ಲಿಷರು ಹಿಂದೂ ಹಾಗೂ  ಮುಸ್ಲಿಂರ ನಡುವೆ ಕಂದಕ ಸೃಷ್ಟಿಸುವ ಸಲುವಾಗಿ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ. ಹೊಸ ಸಂಶೋಧನೆಗಳ ಮೂಲಕ ಈ ತಪ್ಪುಗಳನ್ನು ಸರಿಪಡಿಸುವ ಕೆಲಸ ಆಗಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ. ರಾಘವೇಂದ್ರ ಮಾತನಾಡಿ, ಭೂತಮುಖಿ ಇತಿಹಾಸಕ್ಕಿಂತ ಭವಿಷ್ಯಮುಖಿ ಆಗಿರುವ ಇತಿಹಾಸ ನಮಗೆ ಮುಖ್ಯವಾಗಬೇಕು ಎಂದರು.

ನಗರಸಭೆ ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ಮಾತನಾಡಿ, ಇತಿಹಾಸದ ಅರಿವು ಇಲ್ಲದೇ ಭವಿಷ್ಯವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.ತಾಲ್ಲೂಕು ಇತಿಹಾಸ ವೇದಿಕೆ ಅಧ್ಯಕ್ಷ ಡಾ.ಕೆಳದಿ ವೆಂಕಟೇಶ್ ಜೋಯಿಸ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಎಂ. ನಾಗರಾಜ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ.ಸ್ವಾಮಿ ಹಾಜರಿದ್ದರು.

ಮೊದಲ ಗೋಷ್ಠಿಯಲ್ಲಿ ‘ಪ್ರಾಚೀನ ಹಸ್ತಪ್ರತಿಗಳು’ಕುರಿತು ಹುಲಿಮನೆಗಣಪತಿ ಮಾತನಾಡಿದರು. ಡಾ.ಪ್ರಭಾಕರ್ ರಾವ್ ಪ್ರತಿಕ್ರಿಯಿಸಿದರು. ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಗೋಷ್ಠಿಯಲ್ಲಿ ‘ತಾಲ್ಲೂಕಿನ ನಾಣ್ಯಗಳ ಪರಂಪರೆ’ಕುರಿತು ಡಾ.ದೀಪಕ್ ಮಾತನಾಡಿದರು.ಶಂಕರಶಾಸ್ತ್ರಿ ಪ್ರತಿಕ್ರಿಯಿಸಿದರು. ಡಾ.ಸುರೇಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಮಧುರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜಿ. ನಾಗೇಶ್ ಸ್ವಾಗತಿಸಿದರು. ಆನಂದ ಬಾಳೆಕೊಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.