ತೀರ್ಥಹಳ್ಳಿ: ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಚಂಗಾರು ಗ್ರಾಮದ ರಮೇಶ (59) ಅವರ ಮೃತದೇಹ ಸಮೀಪದ ಗುಡ್ಡದಲ್ಲಿ ಮಂಗಳವಾರ ಪತ್ತೆಯಾಗಿದೆ.
ಕೃಷಿ ಕೆಲಸಕ್ಕೆಂದು ಜುಲೈ 26 ರಂದು ಮನೆಯಿಂದ ತೋಟಕ್ಕೆ ತೆರಳಿದ್ದರು. ಮಾಲತಿ ನದಿಯಲ್ಲಿ ಕೊಚ್ಚಿಹೋದ ಅನುಮಾನದಲ್ಲಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ ವಿಪರೀತ ಮಳೆ ನಡುವೆಯೇ ಮಾಲತಿ ನದಿಯಲ್ಲಿ ತೀವ್ರ ಶೋಧ ನಡೆಸಿದ್ದರು. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.