ADVERTISEMENT

ನಿರಂತರ ಓದಿಗೆ ಕುಂವೀ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 5:30 IST
Last Updated 12 ಅಕ್ಟೋಬರ್ 2011, 5:30 IST

ತೀರ್ಥಹಳ್ಳಿ: ಓದಿನ ಮೂಲಕ ನಮ್ಮ ಮನಸ್ಸು ಪುನಶ್ಚೇತನಗೊಳ್ಳುತ್ತದೆ. ನಾನು ಎಂಟನೇ ತರಗತಿಯಲ್ಲಿದ್ದಾಗ ಒಂದು ಸಾವಿರ ಕಾದಂಬರಿಗಳನ್ನು ಓದಿದ್ದೆ ಎಂದು ಸಾಹಿತಿಕುಂ. ವೀರಭದ್ರಪ್ಪ ಹೇಳಿದರು.
ಈಚೆಗೆ ತೀರ್ಥಹಳ್ಳಿ ತುಂಗಾ ಕಾಲೇಜಿನ ಸಾಹಿತ್ಯದ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ನೀಡಿ `ಓದಿದರೆ ವೃಷ್ಟಾನ್ನ ಸವಿ; ಓದದ ಬಾಯದು ಬಿಲದ ಬಾಯಿ~ ಎಂದರು.

ಓದು ಧ್ಯಾನ, ಮೆಡಿಟೇಷನ್. ಅದು ವ್ಯಕ್ತಿಯ ಮುಖದಲ್ಲಿ ನಗುವನ್ನು ಅರಳಿಸುತ್ತದೆ. ಕೃತಿಯನ್ನು ಓದುವ ಮೂಲಕ ಕೃತಿಕಾರರು ನಮ್ಮಳಗಿದ್ದು, ನಮಗೆ ಮಾರ್ಗದರ್ಶನ ಮಾಡುತ್ತಾರೆಂದೇ ಅರ್ಥ. ನಮ್ಮನ್ನು ಜೀವಂತವಾಗಿಡುವ ಸಾಧನವೇ ಪಠ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ. ಚಂದ್ರಶೇಖರ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಲ್.ಸಿ. ಸುಮಿತ್ರಾ ಉಪಸ್ಥಿತರಿದ್ದರು.

ಕೆ.ಎಲ್. ಪ್ರಸನ್ನ ಆರಂಭ ಗೀತೆ ಹಾಡಿದರು. ಪೃಥ್ವಿ ಸ್ವಾಗತಿಸಿದರು, ಭರತ್ ವಂದಿಸಿದರು. ಅಶ್ವಿನಿ ಅತಿಥಿಗಳ ಪರಿಚಯ ಮಾಡಿದರು. ಸಾಹಿತ್ಯ ಸಂಘದ ಉಪಾಧ್ಯಕ್ಷೆ ಸಿ.ಪಿ. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಡಾ.ಬಿ.ಎಸ್. ನಾಗೇಶ್ ಬೇಂದ್ರೆ ಅವರ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.