ADVERTISEMENT

ನೌಕರ ಭ್ರಷ್ಟಾಚಾರದಿಂದ ಮುಕ್ತನಾಗಿರಲಿ: ನಾ ಡಿಸೋಜ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 5:29 IST
Last Updated 23 ಸೆಪ್ಟೆಂಬರ್ 2013, 5:29 IST

ಸೊರಬ: ರಾಜಕಾರಣಿಗಳಿಗೆ ಉತ್ತಮ ಮಾದರಿಯಾಗಿ ಆಡಳಿತ ಯಂತ್ರ ಚುರುಕಾಗಿರಬೇಕಾದರೆ ನೌಕರರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾಹಿತಿ ನಾ.ಡಿಸೋಜ ಅಭಿಪ್ರಾಯಪಟ್ಟರು.

ಈಚೆಗೆ ಪಟ್ಟಣದ ಗುರುಭವನದಲ್ಲಿ ಸೊರಬ ತಾಲ್ಲೂಕು ನೌಕರರ ಸಂಘ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸರ್ಕಾರ  ಸಮಾಜದ ಕೊಂಡಿಯಾಗಿ ನೌಕರ ಕೆಲಸ ಮಾಡಬೇಕು ಎಂದ ಅವರು, ಇಂದಿನ ದಿನಗಳಲ್ಲಿ ವೇತನಕ್ಕಾಗಿ, ಭತ್ಯೆಗೆ ಹಾಗೂ ಹಬ್ಬದ ಮುಂಗಡ ಹಣಕ್ಕೆ ಸರ್ಕಾರಕ್ಕೆ ಮನವಿ ಮಾಡುವ ನೌಕರರು ನಾವು ಜನರ ಸೇವಕ ಎಂಬುದನ್ನು ಮರೆತು ಬಿಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ತನ್ನ ನೌಕರ ಭ್ರಷ್ಟಚಾರ, ಲಂಚಕೋರ ಆಗಬಾರದು ಎಂದು ಬಯಸುತ್ತಿದೆ. ನೌಕರರ ಹಿತ ಕಾಯುವ ಸರ್ಕಾರಕ್ಕೆ ಮೋಸ ಮಾಡುವ ಕೆಲವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ  ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮಧು ಬಂಗಾರಪ್ಪ, ನೌಕರರು ಕೆಲಸಗಳ ಒತ್ತಡದ ನಡುವೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದಾರ ಮನೋಭಾವ ಬೇಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎಂ,ಡಿ.ಹೊಳೆಲಿಂಗಪ್ಪ ವಹಿಸಿದ್ದರು.

ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಸುರೇಶ್,ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಚ್,ಗಣಪತಿ, ಚಂದ್ರನಾಯ್ಕ್, ರವಿಪ್ರಕಾಶ್, ಲಕ್ಷ್ಮೀ ಬಾಯಿ, ನರಸಿಂಹಯ್ಯ, ಎ.ಚಿನ್ನಪ್ಪ, ನೀಲಪ್ಪ, ರೇಣುಕಪ್ಪ, ನಾಗಭೂಷಣ್, ಎಂ.ಮೋಹನ, ರಾಜಪ್ಪ ಮಾಸ್ತರ್, ವೀರಭದ್ರಪ್ಪ, ಇಂದೂಧರ ಪಾಟೀಲ್, ಎಂ,ಡಿ. ಶೇಖರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.