ADVERTISEMENT

`ಪ್ರಕೃತಿ ಮುಂದೆ ಎಲ್ಲರೂ ಕುಬ್ಜರು'

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:38 IST
Last Updated 7 ಸೆಪ್ಟೆಂಬರ್ 2013, 5:38 IST

ಭದ್ರಾವತಿ:  `ಪ್ರಕೃತಿ ಮುಂದೆ ಯಾರು ದೊಡ್ಡವರಿಲ್ಲ, ಈ ಸತ್ಯವನ್ನು ಪ್ರತಿಯೊಬ್ಬರು ಅರಿಯಬೇಕು' ಎಂದು ದೊಡ್ಡಬಳ್ಳಾಪುರ ವೈಚಾರಿಕಾ ಸಂಶೋಧನಾ ಕೇಂದ್ರದ ಹುಲಿಕಲ್ ನಟರಾಜ್ ಕರೆ ನೀಡಿದರು.

ಇಲ್ಲಿನ ಭೂಮಿಕಾ ವೇದಿಕೆ ಭಾನುವಾರ ನಯನಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಧರ್ಮ ಮತ್ತು ವೈಚಾರಿಕತೆ ವಿಷಯದಲ್ಲಿನ ಪವಾಡಗಳ ಅನಾವರಣ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕತೆ ಮೂಲಕ ಹಲವು ವಿಷಯಗಳನ್ನು ತಿಳಿಸಿದರು.

ವೈಚಾರಿಕತೆ ಎಂದರೆ ಪ್ರತಿಯೊಂದು ವಿಷಯವನ್ನು ಪ್ರಶ್ನಿಸುವ ಮೂಲಕ ಒಪ್ಪಿಕೊಳ್ಳುವ ಯತ್ನ ಮಾಡು ಎಂದು. ಆದರೆ, ಇದಕ್ಕೆ ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡುವ ಮೂಲಕ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆದಿದೆ ಎಂದು ವಿಷಾದಿಸಿದರು.

ವಿಜ್ಞಾನವನ್ನು ಮೀರಿ ಮನುಷ್ಯ ಬದುಕಲು ಸಾಧ್ಯವಿಲ್ಲ. ನಮ್ಮ ಯಾವುದೇ ಕೆಲಸ, ಕಾರ್ಯದಲ್ಲೂ ವೈಜ್ಞಾನಿಕ ವಿಚಾರಧಾರೆ ಅಡಗಿರುತ್ತದೆ. ಇದನ್ನು ಅರಿತಾಗ ಪವಾಡ ಮೂಲಕ ಮೋಸ ಹೋಗಲು ಸಾಧ್ಯವಿಲ್ಲ ಎಂದರು.

ವಿಷಯಗಳನ್ನು ತಿಳಿಸುವ ಜತೆಗೆ ಸುಮಾರು 50ಕ್ಕೂ ಹೆಚ್ಚು ಪ್ರಾತ್ಯಕ್ಷಿಕತೆ ನಡೆಸಿಕೊಟ್ಟರು. ನಂತರ ಪ್ರಶ್ನೋತ್ತರ ನಡೆಯಿತು.
ವೇದಿಕೆ ಅಧ್ಯಕ್ಷ ಡಾ.ಕೃಷ್ಣಾ ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆ.ಲಕ್ಷ್ಮಣರಾವ್, ಸಿ.ಎಲ್.ಮುನಿರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ, ಮೀನಾ, ವಾಣಿ ಪ್ರಾರ್ಥಿಸಿದರು, ಶಾರದ ನಿರೂಪಿಸಿದರು, ಅಪರಂಜಿ ಶಿವರಾಜ್ ಸ್ವಾಗತಿಸಿದರು, ಆನಂದ್ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.