ADVERTISEMENT

ಬನ್ನಿ ಮಹಾಂಕಾಳಿ ರಥೋತ್ಸವ

ಸೊರಬ ತಾಲ್ಲೂಕಿನ ಹೆಚ್ಚೆ ಗ್ರಾಮದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 9:14 IST
Last Updated 4 ಏಪ್ರಿಲ್ 2013, 9:14 IST

ಸೊರಬ: ತಾಲ್ಲೂಕಿನ ಹೆಚ್ಚೆ ಗ್ರಾಮದಲ್ಲಿ  ಬನ್ನಿ ಮಹಾಂಕಾಳಿ ದೇವಿ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯಶೀಲಗೌಡ್ರು ಅಂಕರವಳ್ಳಿ ಮತ್ತು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಪತ್‌ಕುಮಾ ಜೋಯಿಷ್ ರಥೋತ್ಸವಕ್ಕೆ ಚಾಲನೆ ನೀಡಿದರು.

ಮಂಗಳವಾರ ದೇವಿಗೆ ವಿವಿಧ ಪೂಜಾ ಕಾರ್ಯಕ್ರಮ ಜರುಗಿದವು.ಬುಧವಾರ ಬೆಳಿಗ್ಗೆ ಹೆಚ್ಚೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಚ್ಚೆ, ವಕ್ಕಲುಕೊಪ್ಪ, ಹೊಸಕೊಪ್ಪ, ಕಾರೇಹೊಂಡ, ಗ್ರಾಮಸ್ಥರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಗ್ರಾಮಸ್ಥರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಬೇವಿನಉಡುಗೆ ಹರಕೆ ತೀರಿಸಿದರು. ಜಾತ್ರಾ ಮಹೋತ್ಸವ ದಲ್ಲಿ ಗ್ರಾಮಸ್ಥರಾದ ಹೊಂದಾಸನ ಧರ್ಮಪ್ಪ, ಹೊಸಕೊಪ್ಪದ ರಂಗನಾಥ್, ವಕ್ಕಲುಕೊಪ್ಪದ ಕಾಳಪ್ಪ, ಕೆರಿಯಪ್ಪ, ಜಯಶೀಲ, ಕಾರೇಹೊಂಡ ಬೀರಪ್ಪ, ಹುಚ್ಚಪ್ಪ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ವಿಶ್ವನಾಥ, ವಿನಾಯಕ, ಹೆಡ್ಡೆ ನಾರಯಣಪ್ಪ, ರೇವಣಪ್ಪ, ಇಕ್ಕೇರಿ ರಾಮಪ್ಪ, ಹಾಜರಿದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.