ADVERTISEMENT

‘ಮೂರು ಪಕ್ಷಗಳ ವೈಫಲ್ಯದಿಂದ ಕಾರ್ಖಾನೆಗಳಿಗೆ ದುಸ್ಥಿತಿ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 5:48 IST
Last Updated 5 ಮಾರ್ಚ್ 2018, 5:48 IST

ಭದ್ರಾವತಿ: ‘ಕೈಗಾರಿಕಾ ನಗರದ ಇಂದಿನ ದುಸ್ಥಿತಿಗೆ ಮೂರು ಪಕ್ಷಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಕಾರಣ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ಶಿವಕುಮಾರ್ ದೂರಿದರು.

ನಗರದ ಸುನಂದ ಸಭಾಂಗಣದಲ್ಲಿ ಈಚೆಗೆ ಜರುಗಿದ ಪಕ್ಷದ ಕಾರ್ಯಕರ್ತರ ಸಭೆ, ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಮಾತನಾಡಿದರು.

ಇಲ್ಲಿಂದ ಆಯ್ಕೆಯಾದ ಪಕ್ಷದ ಅಭ್ಯರ್ಥಿಗಳು ಹಾಗೂ ವ್ಯಕ್ತಿಗಳು ಕಾರ್ಖಾನೆಗಳ ಉಳಿವಿಗೆ ಬೇಕಾದ ಇಚ್ಛಾಶಕ್ತಿ ಪ್ರಕಟ ಮಾಡದ ಕಾರಣ ಇತಿಹಾಸದ ಎಂಪಿಎಂ., ವಿಐಎಸ್ಎಲ್ ಕಾರ್ಖಾನೆಗಳು ಅವನತಿಯ ಹಾದಿ ಹಿಡಿದವು ಎಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ಪಕ್ಷದ ರಾಜ್ಯ ಸಹಕಾರ್ಯದರ್ಶಿ ವಿಜಯಶರ್ಮ ಮಾತನಾಡಿ, ‘ಪಕ್ಷದ ಕಾರ್ಯಕರ್ತರು ಕ್ಷೇತ್ರದ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಪಕ್ಷ ರೂಪಿಸಿರುವ ಯೋಜನೆಗಳ ವಿಚಾರವನ್ನು ಮನೆಗಳಿಗೆ ತಲುಪಿಸುವ ಕೆಲಸ ಮಾಡಲಿದೆ’ ಎಂದು ಹೇಳಿದರು.

ಪಕ್ಷದ ನಿಯೋಜಿತ ಅಭ್ಯರ್ಥಿಯಾಗಿ ಎಚ್. ರವಿಕುಮಾರ್ ಅವರನ್ನು ರಾಜ್ಯ ಹಾಗೂ ಕೇಂದ್ರ ನಾಯಕತ್ವಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖಂಡರು ಘೋಷಿಸಿದರು.

ಪರಮೇಶ್ವರಾಚಾರ್, ಡಿ.ಎಂ. ಚಂದ್ರಪ್ಪ, ಮುನೀರ್ ಅಹಮದ್, ಜ್ಞಾನಸಾಗರ್, ರಾಬಿನ್, ಜೋಸೆಫ್, ಮುಳ್ಕೆರೆ ಲೋಕೇಶ್, ಪ್ರದೀಪಕುಮಾರ್, ರಾಜು, ರಾಜೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.