ADVERTISEMENT

ರಾಜ್ಯಮಟ್ಟದ ‘ನಿಸರ್ಗ ಲಾಸ್ಯ ಪ್ರಕೃತಿ ಚಿತ್ರಣ’ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 6:03 IST
Last Updated 2 ಡಿಸೆಂಬರ್ 2013, 6:03 IST

ರಿಪ್ಪನ್‌ಪೇಟೆ: ಕರ್ನಾಟಕ ರಾಜ್ಯ ಸರ್ಕಾರಿ ಚಿತ್ರಕಲಾ ಶಿಕ್ಷಕರ ಸಂಘ, ಜೈನ ಮಠ ಹುಂಚ ಹಾಗೂ ಹುಂಚ ಗ್ರಾಮದವರ ಸಹಯೋಗದಲ್ಲಿ
ಡಿ.3ರಿಂದ  5ರ ವರೆಗೆ ಹುಂಚ ಕ್ಷೇತ್ರದಲ್ಲಿ ‘ನಿಸರ್ಗ ಲಾಸ್ಯ ಪ್ರಕೃತಿ ಚಿತ್ರಣ’ ಶಿಬಿರ ಆಯೋಜಿಸಿದೆ.

ಡಿ.3 ರಂದು ಬೆಳಿಗ್ಗೆ 10–30 ಕ್ಕೆ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರು ಮಠದ ಚಂದ್ರಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಡಿ.4 ರಂದು ಸಂಜೆ 5ಕ್ಕೆ  ಗಾಯಕ ಮತ್ತು ರಾಗ ಸಂಯೋಜಕ ಹೊ.ನಾ. ರಾಘವೇಂದ್ರ ಅವರಿಂದ ಕನ್ನಡದ ಪ್ರಸಿದ್ಧ ಭಾವಗೀತೆಗಳ ಗಾಯನ ಹಾಗೂ  ಚಿತ್ರ ಕಲಾವಿದರಿಂದ ಚಿತ್ರಣ ಕಾರ್ಯಕ್ರಮ ನಡೆಯಲಿದೆ.

ಡಿ.5ರಂದು ಮಧ್ಯಾಹ್ನ 2.30 ರಿಂದ ಶಿಬಿರದಲ್ಲಿ ರಚಿತವಾದ ಚಿತ್ರ ಕಲಾಕೃತಿಗಳ  ಪ್ರದರ್ಶನ ನಡೆಯಲಿದೆ.
ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾರೋಪ ಸಮಾರಂಭ
ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.