ADVERTISEMENT

ರಿಪ್ಪನ್‌ಪೇಟೆ: ಸಂತೆ ಮಾರುಕಟ್ಟೆ ಅಭಿವೃದ್ಧಿಗೆ ₹1 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 10:01 IST
Last Updated 8 ಅಕ್ಟೋಬರ್ 2017, 10:01 IST
ರಿಪ್ಪನ್‌ಪೇಟೆ ಸಂತೆ ಮಾರುಕಟ್ಟೆಯ ಕುಂದು ಕೊರತೆಗಳ ಕುರಿತು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದರು.
ರಿಪ್ಪನ್‌ಪೇಟೆ ಸಂತೆ ಮಾರುಕಟ್ಟೆಯ ಕುಂದು ಕೊರತೆಗಳ ಕುರಿತು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದರು.   

ರಿಪ್ಪನ್‌ಪೇಟೆ: ಪಟ್ಟಣದ ಸಾಗರ ರಸ್ತೆಯ ನೂತನ ಸಂತೆ ಮಾರುಕಟ್ಟೆ ಪ್ರಾಂಗಣದ ಅಭಿವೃದ್ಧಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಸತತ ಪರಿಶ್ರಮದಿಂದ ನಬಾರ್ಡ್‌ನ (ಆರ್‌ಐಡಿಎಫ್‌) ಗ್ರಾಮೀಣ ಸಂತೆ ಅಭಿವೃದ್ಧಿ ಯೋಜನೆಯಡಿ ₹ 1ಕೋಟಿ ಅನುದಾನ ದೊರೆತಿದೆ ಎಂದು ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಬಿ.ಪಿ.ರಾಮಚಂದ್ರ ಹೇಳಿದರು.

ಅಲ್ಪಾವಧಿ ಟೆಂಡರ್‌ ಮೂಲಕ ಅತೀ ಶೀಘ್ರದಲ್ಲೆ ಕಾಮಗಾರಿಗೆ ಚಾಲನೆ ನೀಡಿ, ಮೊದಲ ಹಂತವಾಗಿ ಅದ್ಯತೆ ಮೇರೆಗೆ ಶುದ್ಧ ಕುಡಿಯುವ ನೀರಿನ ಘಟಕ, ಕಾಂಕ್ರಿಟ್‌ ರಸ್ತೆ, ಒಳ ಚರಂಡಿ ಕಾಮಗಾರಿಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಮಾರ್ಚ್‌ ಅಂತ್ಯದ ಒಳಗೆ ಈ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ಅಭಿವೃದ್ಧಿ ಯೋಜನೆಯ ಶಿವಮೊಗ್ಗ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್‌, ಸಹಾಯಕ ಅಭಿಯಂತರ ಸಂಗಮೇಶ, ಅಧೀಕ್ಷಕ ರವಿಕುಮಾರ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಎನ್‌.ಚಂದ್ರೇಶ, ಎಪಿಎಂಸಿ ನಿರ್ದೇಶಕ ಈಶ್ವರಪ್ಪ ಹಾರೋಹಿತ್ಲು, ಗ್ರಾಮ ಪಂಚಾಯ್ತಿ ಸದಸ್ಯ ಮಧು ಸೂದನ್‌, ಪಿಡಿಒ ಚಂದ್ರಶೇಖರ್‌ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.