ADVERTISEMENT

ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 6:05 IST
Last Updated 2 ಫೆಬ್ರುವರಿ 2011, 6:05 IST

ಸೊರಬ: ‘ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕುವ ಶ್ರೇಷ್ಠ ಕೆಲಸ ಶಿಕ್ಷಕರದು. ಮಕ್ಕಳ ಪೋಷಕರ ಸಹಕಾರದೊಂದಿಗೆ ಉತ್ತಮ ಸಮಾಜ ಕಟ್ಟುವ ಕೆಲಸವನ್ನು ಅವರು ಮಾಡಬೇಕು’ ಎಂದು ಶಾಸಕ ಎಚ್. ಹಾಲಪ್ಪ ಕರೆ ನೀಡಿದರು.ಮಂಗಳವಾರ ಹಳೇಸೊರಬದ ಶಾಸಕರ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಶಿಕ್ಷಕರ ಸಂಘ ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಯಾಂತ್ರಿಕ ಕೆಲಸದ ನಡುವೆ ಕ್ರೀಡೆ ಶಿಕ್ಷಕರಲ್ಲಿ ದೈಹಿಕ, ಮಾನಸಿಕ ಶಕ್ತಿ ತುಂಬಲು ನೆರವಾಗುತ್ತದೆ ಎಂದರು.ಜಿ.ಪಂ. ಸದಸ್ಯರಾದ ಎಚ್.ಬಿ. ಗಂಗಾಧರಪ್ಪ ಧ್ವಜಾರೋಹಣ ನೆರವೇರಿಸಿ, ಗುರುಕುಮಾರ್ ಎಸ್. ಪಾಟೀಲ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಪಾಣಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಅಧ್ಯಕ್ಷ ಹೊಳೆಲಿಂಗಪ್ಪ, ಜಿ.ಪಂ. ಸದಸ್ಯೆ ಮಲ್ಲಮ್ಮ, ಪ.ಪಂ. ಸದಸ್ಯ ದಿನಕರಭಟ್ ಭಾವೆ, ತಾ.ಪಂ. ಇಒ ಪುಷ್ಪಾ ಎಂ. ಕಮ್ಮಾರ್, ಗಜಾನನರಾವ್, ಅಕ್ಷರ ದಾಸೋಹ ಅಧಿಕಾರಿ ರಾಮಪ್ಪ, ಎಸ್.ಎಸ್, ಬಣಕಾರ್, ಬಿಆರ್‌ಸಿಯ ನಿರಂಜನಮೂರ್ತಿ, ನೌಕರರ ಸಂಘದ ಅಧ್ಯಕ್ಷ ನೀಲಪ್ಪ, ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಮಹೇಶ್ವರಪ್ಪ, ಬಸವಣ್ಯಪ್ಪ, ಪದಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.

ನೂರಾರು ಶಿಕ್ಷಕ, ಶಿಕ್ಷಕಿಯರು ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಬಿಇಒ ಪಿ. ಹಾಲನಾಯ್ಕೊ ಪ್ರಾಸ್ತಾವಿಕ ಮಾತನಾಡಿದರು. ಗಿರಿಜಾ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿದರು. ಮಧುಕೇಶ್ವರ ವಂದಿಸಿದರು. ಪ್ರಕಾಶ್ ಮಡ್ಲೂರ್, ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.