ADVERTISEMENT

ಶಿವಮೊಗ್ಗದಿಂದ ಮುಂಬೈಗೆ ವೋಲ್ವೊ ಬಸ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 8:20 IST
Last Updated 13 ಮಾರ್ಚ್ 2012, 8:20 IST

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರತಿದಿನ ಶಿವಮೊಗ್ಗ ಬಸ್‌ನಿಲ್ದಾಣದಿಂದ ಮುಂಬೈಗೆ ವೋಲ್ವೊ ಬಸ್ ಸಂಚಾರ ಆರಂಭಿಸಿದೆ. 

 ಪ್ರತಿದಿನ ಸಂಜೆ 4.45ಕ್ಕೆ ಶಿವಮೊಗ್ಗದಿಂದ ಹೊರಡುವ ವಾಹನ ಹರಿಹರ-ಹುಬ್ಬಳ್ಳಿ- ಬೆಳಗಾವಿ-ಕೊಲ್ಲಾಪುರ- ಪುಣೆ ಮಾರ್ಗವಾಗಿ ಬೆಳಿಗ್ಗೆ 7ಕ್ಕೆ ಮುಂಬೈ ತಲುಪಲಿದೆ. ಅಂತೆಯೇ ಸಂಜೆ 4.30ಕ್ಕೆ ಮುಂಬೈನಿಂದ ಹೊರಡುವ ವಾಹನ ಬೆಳಿಗ್ಗೆ 7ಕ್ಕೆ ಶಿವಮೊಗ್ಗ ತಲುಪಲಿದೆ.

ಸಾರ್ವಜನಿಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿವಮೊಗ್ಗ ಘಟಕದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.