ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸದೃಢತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:35 IST
Last Updated 7 ಜನವರಿ 2012, 10:35 IST

ಶಿವಮೊಗ್ಗ: ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಮನರಂಜನೆಗೆ ಸೀಮಿತಗೊಳ್ಳದೇ ಮನುಷ್ಯನನ್ನು  ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸುತ್ತವೆ ಎಂದು ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷರ ವಿಶೇಷ ಪ್ರತಿನಿಧಿ ರೊ.ಮಹೇಶ್ ಕೊಟ್‌ಬಾಗಿ ಅಭಿಪ್ರಾಯಪಟ್ಟರು.

ನಗರದ ಸಾಗರ ರಸ್ತೆಯ ಶರಾವತಿ ಡೆಂಟಲ್ ಕಾಲೇಜ್ ಆವರಣದಲ್ಲಿ ಶುಕ್ರವಾರ ರೋಟರಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ `ನಿತ್ಯೋತ್ಸವ -2012~ 42ನೇ ರೋಟರಿ 3180 ಜಿಲ್ಲಾ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡಿನ ಶಿವಮೊಗ್ಗ ಸಾಂಸ್ಕೃತಿಕ ಸೊಗಡಿನ ತವರೂರು ಎಂದು ಬಣ್ಣಿಸಿದ ಅವರು, ಇಂತಹ ನೆಲದಲ್ಲಿ ನಿತ್ಯೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ರೋಟರಿ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ರಾಜ್ಯಪಾಲ ಎಚ್.ಎಲ್. ರವಿ, ರೋಟರಿ ಸದಸ್ಯ ಕಡಿದಾಳ್ ಗೋಪಾಲ್, ಕುಮಾರ್,ಜಿ.ಎಸ್.ಎನ್. ಮೂರ್ತಿ, ಚಂದ್ರಹಾಸ್ ಬಿ. ರಾಯ್ಕರ್, ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.