ADVERTISEMENT

ಹಕ್ಕಿಗಳ ಬದುಕಿಗೆ ಪೂರಕ ವಾತಾವರಣ ನಿರ್ಮಿಸಿ

ಜೆಸಿಐ ಸೊರಬ ವೈಜಯಂತಿ ಕಾರ್ಯದರ್ಶಿ ನೆಮ್ಮದಿ ಶ್ರೀಧರ್ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 11:11 IST
Last Updated 7 ಏಪ್ರಿಲ್ 2018, 11:11 IST

ಸೊರಬ: ಹಕ್ಕಿಗಳು ಗೂಡು ಕಟ್ಟುವ ರಚನೆ, ಸ್ಥಳದ ಆಯ್ಕೆ, ರಕ್ಷಣೆಯ ವಿಧಾನ ಎಲ್ಲದರಲ್ಲೂ ವೈಶಿಷ್ಟ್ಯವನ್ನು ಕಾಣಬಹುದು ಎಂದು ಜೆಸಿಐ ಸೊರಬ ವೈಜಯಂತಿ ಕಾರ್ಯದರ್ಶಿ ನೆಮ್ಮದಿ ಶ್ರೀಧರ್ ಹೇಳಿದರು.

ಪಟ್ಟಣದ ಪಿಡಬ್ಲ್ಯೂಡಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ಸೊರಬ ವೈಜಯಂತಿ, ನಾಡಚಾವಡಿ ಕೆ.ವಿ.ಸುಬ್ಬಣ್ಣ ರಂಗ ಸಮೂಹ, ಲಯನೆಸ್ ಕ್ಲಬ್ ಹಾಗೂ ಸಾರಾ ಸಂಸ್ಥೆ ವತಿಯಿಂದ ಗುರುವಾರ ಹಮ್ಮಿಕೊಂಡ ಪರಿಸರಕ್ಕೆ ಸಂಬಂಧಿಸಿದ ವಿಡಿಯೊ ಪ್ರದರ್ಶನ ಮತ್ತು ಹಕ್ಕಿಗಳ ಗೂಡು ರಚನೆಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳು ಅವರ ಮನೆಯ ಸುತ್ತಲೂ ಪಕ್ಷಿಗಳು ನೆಲೆಸುವಂತಹ ವಾತಾವರಣವನ್ನು ನಿರ್ಮಿಸಬೇಕು. ಪಕ್ಷಿಗಳಿಗೆ ಗೂಡು ನಿರ್ಮಿಸಲು ಅವಶ್ಯ
ವಿರುವ ವಸ್ತುಗಳನ್ನು ಒದಗಿಸುವ ಪ್ರಯತ್ನ
ಮಾಡಬೇಕೇ ಹೊರತು ಪರಿಸರ ನಿರ್ನಾಮ ಮಾಡಬಾರದು. ಬೇಸಿಗೆ ಯಲ್ಲಿ ಮನೆಯ ಮೇಲೆ ನೀರಿಡುವ ಮೂಲಕ ಪಕ್ಷಿಸಂಕುಲವನ್ನು ರಕ್ಷಿಸುವ ಚಿಂತನೆ ಮಾಡಬೇಕು ಎಂದರು.

ADVERTISEMENT

ರಂಗಕರ್ಮಿ ಎಚ್.ಎಸ್. ಪ್ರಸನ್ನ, ದೊಂಬೆಕೊಪ್ಪದ ಕುಮಾರ್ ಸಾರಾ ಸಂಸ್ಥೆಯ ಗುರುಮೂರ್ತಿ ವರದಾ ಮೂಲ, ಲಯನೆಸ್ ಅಧ್ಯಕ್ಷೆ ಪುಷ್ಪಲತಾ ಬಾವಿಮಠ್, ಭಾರತಿ ಹನುಮಂತಪ್ಪ, ಮುಖ್ಯ ಶಿಕ್ಷಕ ಕೃಷ್ಣಾನಂದ, ಎಸ್.ಡಿ.ಎಂ.ಸಿ. ಕಮಿಟಿ ಅಧ್ಯಕ್ಷ ಏಕಾಂತಪ್ಪ ರಾಯನ್, ಮಹೇಶ್ ಖಾರ್ವಿ, ಇಮ್ರಾನ್ ಖಾನ್, ಸುಮಿತ್ರಾ ಎನ್. ನಾಯಕ್, ಸುಷ್ಮಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.