ADVERTISEMENT

ಹಚ್ಚಹಸಿರಿನ ನಡುವೆ ಕುವೆಂಪು ವಿವಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 10:50 IST
Last Updated 7 ಜುಲೈ 2012, 10:50 IST

`ನಮ್ಮ ಕುವೆಂಪು ವಿಶ್ವವಿದ್ಯಾಲಯ ಬಿ.ಆರ್. ಪ್ರಾಜೆಕ್ಟ್‌ನ ಹಳ್ಳಿಗಾಡಿನಲ್ಲಿದೆ. ಹಳ್ಳಿಯಂದರೆ ಹಿಂದಣ ಶಾಂತ ಅರಣ್ಯಾಶ್ರಮವಲ್ಲ. ಹೊಸ ನಾಗರಿಕತೆಯ ಎಲ್ಲಾ ರೋಗಗಳ ಜತೆ ಹೆಣಗಾಡುತ್ತ ಬದುಕುತ್ತಿರುವ ಹೊಸ ಗಿಜಿ-ಗಿಜಿ ಹಳ್ಳಿ. ಆ ಜನರ ಮಧ್ಯೆ ಸೇರಿಕೊಂಡು ಇಲ್ಲಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಂಚರಿಸಬೇಕಾಗುತ್ತದೆ. ನಮ್ಮದಲ್ಲದ ಬೇರೆ ಯಾವುದೋ ಲೋಕದ ಸುಂದರ ದ್ವೀಪ ಅನ್ನಿಸುವಂಥ ಮಾನಸ ಗಂಗೋತ್ರಿಯಂತಹ ದಂತಗೋಪುರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರತ್ಯೇಕಿತರಾಗಿ ಬೆಳೆಯುವುದಕ್ಕಿಂತಲೂ ಈ ಬಿ.ಆರ್. ಪ್ರಾಜೆಕ್ಟ್‌ನಂಥ ಕೇಂದ್ರದಲ್ಲಿ ಬೆಳೆಯುವುದು ಹೆಚ್ಚು ಪ್ರಯೋಜನವಾದೀತು~

- ಇದು ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ಅವರ `ಆಯ್ದ ಬರಹಗಳು~ ಸಂಕಲನದಲ್ಲಿ `ಶ್ರೇಷ್ಠತೆಯ ವ್ಯಸನ~ ಲೇಖನದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಬಗ್ಗೆ ಹೇಳಿದ ಮಾತುಗಳಿವು.

ಸಂಪರ್ಕ
ಹಚ್ಚಹಸಿರಿನ ದಟ್ಟ ಪ್ರಕೃತಿ ಮಧ್ಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಮೈದಾಳಿದ್ದು 1987ರಲ್ಲಿ. ಶಿವಮೊಗ್ಗ ನಗರದಿಂದ 28 ಕಿ.ಮೀ. ದೂರದಲ್ಲಿದೆ. ಭದ್ರಾವತಿಯಿಂದ 18 ಕಿ.ಮೀ. ಹತ್ತಿರದಲ್ಲಿದೆ. ಕ್ಯಾಂಪಸ್ ತಲುಪಲು ಎಲ್ಲಾ ಕಡೆಗಳಿಂದ ಖಾಸಗಿ, ಸರ್ಕಾರಿ ಬಸ್ ವ್ಯವಸ್ಥೆ ಇದೆ. ಶಿವಮೊಗ್ಗ, ಭದ್ರಾವತಿ, ತರೀಕೆರೆಗಳ ನಡುವೆ ರೈಲು ಸಂಪರ್ಕವೂ ಇದೆ.

230 ಎಕರೆ ಕ್ಯಾಂಪಸ್
ಸುಮಾರು 230 ಎಕರೆ ಕ್ಯಾಂಪಸ್ ಹೊಂದಿರುವ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳು ಬರುತ್ತದೆ. ಇದರಲ್ಲಿ 81 ಸಂಯೋಜಿತ ಕಾಲೇಜುಗಳಿವೆ. ಮೂರು ಘಟಕ ಕಾಲೇಜುಗಳಿವೆ. ಚಿಕ್ಕಮಗಳೂರಿನ ಕಡೂರಿನಲ್ಲಿ ಸ್ನಾತಕೋತ್ತರ ಕೇಂದ್ರ ಹೊಂದಿದೆ.

ವಿಶ್ವವಿದ್ಯಾಲಯದಲ್ಲಿ ಎಂಕಾಂಗೆ ಹೆಚ್ಚಿನ ಬೇಡಿಕೆ ಇದೆ. ಕಲಾ ವಿಭಾಗದಲ್ಲಿ ಅರ್ಥಶಾಸ್ತ್ರ, ಇಂಗ್ಲಿಷ್ ವಿಷಯಗಳನ್ನು ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಚಿಂತನೆ ಇದೆ ಎನ್ನುತ್ತಾರೆ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ ಪ್ರೊ.ಟಿ.ಆರ್. ಮಂಜುನಾಥ.

 ಸಂಶೋಧನೆಗೂ ವಿಪುಲ ಅವಕಾಶ

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಅಬ್ದುಲ್ ನಜೀರ್‌ಸಾಬ್ ಅಧ್ಯಯನ ಪೀಠ, ಬಸವೇಶ್ವರ ಅಧ್ಯಯನ ಪೀಠ, ಕೆ.ಎಚ್. ಪಾಟೀಲ್ ಅಧ್ಯಯನ ಪೀಠ ಹಾಗೂ ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠಗಳನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ.

  
ಪದವಿಗಳ ವಿದ್ಯಾರ್ಹತೆ ಮತ್ತು ಮಾಹಿತಿ, ಅರ್ಜಿ ನಮೂನೆ, ಪ್ರವೇಶ ಪರೀಕ್ಷೆ, ಶುಲ್ಕ ಹಾಗೂ ಇತರೆ ಪೂರಕ ಮಾಹಿತಿಗಳನ್ನು ವಿವರಣಾ ಪುಸ್ತಕದಿಂದ ಪಡೆಯಬಹುದು ಅಥವಾ ವೆಬ್‌ಸೈಟ್ ಡಿಡಿಡಿ.ಝ್ಠೇಛಿಞಟ್ಠ.ಚ್ಚ.ಜ್ಞಿ   ಸಂಪರ್ಕಿಸಬಹುದು. ಪ್ರತಿ ವಿವರಣಾ ಪುಸ್ತಕದ ಶುಲ್ಕ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ರೂ 250, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳಿಗರೂೆ 150.
ಈ ವಿದ್ಯಾರ್ಥಿಗಳು ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಹೆಚ್ಚುವರಿ ಅರ್ಜಿಗಳಿಗೆ ರೂ 50. ಪ್ರತಿ ವಿದ್ಯಾರ್ಥಿಗಳಿಗೆ ತಲಾ ಎರಡು ಹೆಚ್ಚುವರಿ ಅರ್ಜಿಗಳನ್ನು ಮಾತ್ರ ನೀಡಲಾಗುವುದು.

ಎಂಬಿಎಫ್‌ಐ, ಎಂಎಸ್ಸಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಎಂಎಸ್‌ಡಬ್ಲ್ಯೂ, ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂಬಿಎ, ಎಂಸಿಎ, ಎಂಟೆಕ್ ನ್ಯಾನೋ ಸೈನ್ಸ್ ಅಂಡ್ ಟೆಕ್ನಾಲಜಿ, ಎಂಎಸ್ಸಿ ಕ್ಲಿನಿಕಲ್ ಸೈಕಾಲಜಿ, ಬಿಪಿಇಎಡ್ ಹಾಗೂ ಎಂಪಿಇಡಿ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರವೇಶಾತಿ ಪರೀಕ್ಷಾ ಶುಲ್ಕ ರೂ 200 (ಸಾಮಾನ್ಯ ವರ್ಗ) ಮತ್ತರೂು 100 (ಎಸ್‌ಸಿ/ಎಸ್‌ಟಿ/ಪ್ರವರ್ಗ-1) ಅನ್ನು ಹೆಚ್ಚುವರಿಯಾಗಿ ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ - ಇವರ ಪದನಾಮದಲ್ಲಿ ಸಂದಾಯವಾಗುವಂತೆ ಡಿಡಿ ಮೂಲಕ ಪಾವತಿಸಬೇಕು.

ಅರ್ಜಿ ಹಾಗೂ ವಿವರಣಾ ಪುಸ್ತಕಗಳನ್ನು ಜುಲೈ 10ರಿಂದ ವಿಶ್ವವಿದ್ಯಾಲಯದ ಎಂಪ್ಲಾಯಿಸ್ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ, ಶಂಕರಘಟ್ಟ, ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ ಮತ್ತು ಕಡೂರು ಅಧ್ಯಯನ ಕೇಂದ್ರದಲ್ಲಿ ನಿಗದಿತ ಶುಲ್ಕ ಪಾವತಿಸಿ, ಪಡೆಯಬಹುದು.

 ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿಯೂ ಜುಲೈ 9ರಿಂದ ಅಗತ್ಯ ಮಾಹಿತಿಗಳು ಹಾಗೂ ಅರ್ಜಿಗಳನ್ನು ಪಡೆಯಬಹುದು. ಅರ್ಜಿ ಶುಲ್ಕ ರೂ 250 (ಸಾಮಾನ್ಯ ವರ್ಗ) ಹಾಗೂ ರೂ 150 (ಎಸ್‌ಸಿ/ಎಸ್‌ಟಿ/ಪ್ರವರ್ಗ-1) ರ ಡಿಡಿ ಯನ್ನು ಅರ್ಜಿಯೊಂದಿಗೆ ಲಗತಿಸಬೇಕು.

ಪ್ರತಿಕೋರ್ಸ್‌ಗಳಿಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ಭರ್ತಿ ಮಾಡಿ ಜುಲೈ 25ರ ಒಳಗಾಗಿ ಸಲ್ಲಿಸಬೇಕು. ಎಂಸಿಎ ಮತ್ತು ಎಂಬಿಎ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬೆಂಗಳೂರು -ಇವರು ನಡೆಸುವ ಅರ್ಹತಾ ಪರೀಕ್ಷೆ ಮೂಲಕ ಪ್ರವೇಶ ಹೊಂದಲು ಅರ್ಹರಾಗಿರುತ್ತಾರೆ. ಪ್ರವೇಶಾತಿ ಮಿತಿಯು ಭರ್ತಿಯಾಗದಿದ್ದ ಸೀಟುಗಳಿಗೆ ವಿಶ್ವವಿದ್ಯಾಲಯವು ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆಯನ್ನು ಏರ್ಪಡಿಸುತ್ತದೆ.

ಪ್ರವೇಶ ಪರೀಕ್ಷೆ ದಿನಾಂಕ ಜುಲೈ 25 ಮತ್ತು 26ರಂದು ನಡೆಯಲಿದೆ. ಆಗಸ್ಟ್ 1ರಿಂದ ತರಗತಿ ಆರಂಭವಾಗುತ್ತದೆ.

 ಸ್ನಾತಕೋತ್ತರ ಪದವಿ (ಪಿಜಿ) ಕೋರ್ಸ್‌ಗಳು
ಕಲಾ ವಿಭಾಗ: ಕನ್ನಡ, ಅರ್ಥಶಾಸ್ತ್ರ, ಇಂಗ್ಲಿಷ್, ಹಿಂದಿ, ಇತಿಹಾಸ ಮತ್ತು ಪ್ರಕ್ತಾನ ಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಮಾಜ ಕಾರ್ಯ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ.
ವಾಣಿಜ್ಯ ವಿಭಾಗ: ಎಂ.ಕಾಂ (ವಾಣಿಜ್ಯಶಾಸ್ತ್ರ), ಎಂಬಿಎ (ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್), ಎಂಬಿಎಫ್‌ಐ (ಮಾಸ್ಟರ್ ಆಫ್ ಬ್ಯಾಂಕಿಂಗ್, ಫೈನಾನ್ಸ್ ಅಂಡ್ ಇನ್ಸೂರೆನ್ಸ್), ಎಂಎಚ್‌ಆರ್‌ಎಂ (ಮಾಸ್ಟರ್ ಆಫ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್), ಎಂಟಿಎ (ಮಾಸ್ಟರ್ ಆಫ್ ಟೂರಿಸಂ ಅಂಡ್ ಅಡ್ಮಿನಿಸ್ಟ್ರೇಷನ್).
ಶಿಕ್ಷಣ ವಿಭಾಗ: ಎಂಇಡಿ (ಮಾಸ್ಟರ್ ಆಫ್ ಎಜುಕೇಷನ್), ಎಂಪಿಇಡಿ (ಮಾಸ್ಟರ್ ಆಫ್ ಫಿಸಿಕಲ್ ಎಜುಕೇಷನ್) ಬಿ.ಪಿ.ಇಡಿ (ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಷನ್).
ಕಾನೂನು ವಿಭಾಗ: ಎಲ್‌ಎಲ್‌ಎಂ (ಬಿಸಿನೆಸ್ ಲಾ).
ವಿಜ್ಞಾನ ವಿಭಾಗ: ಅನ್ವಯಿಕ ಸಸ್ಯಶಾಸ್ತ್ರ, ಅನ್ವಯಿಕ ಪ್ರಾಣಿಶಾಸ್ತ್ರ, ಜೀವರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಜೈವಿಕ ಮಾಹಿತಿ ತಂತ್ರಜ್ಞಾನ, ರಸಾಯನಶಾಸ್ತ್ರ, ಕಂಪ್ಯೂಟರ್ ಅಪ್ಲಿಕೇಷನ್ಸ್, ಕಂಪ್ಯೂಟರ್ ಸೈನ್ಸ್, ಇಎಸ್‌ಆರ್‌ಎಂ ಮತ್ತು ಎಂಆರ್‌ಎಸ್‌ಎಂ, ಎಲೆಕ್ಟ್ರಾನಿಕ್ಸ್, ಪರಿಸರ ವಿಜ್ಞಾನ, ಔದ್ಯೋಗಿಕ ರಸಾಯನಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಗಣಿತ ಶಾಸ್ತ್ರ, ಸೂಕ್ಷ್ಮಾಣು ಜೀವಶಾಸ್ತ್ರ, ಎಂಟೆಕ್ ನ್ಯಾನೊ ಸೈನ್ಸ್ ಅಂಡ್ ಟೆಕ್ನಾಲಜಿ, ಸಾವಯವ ರಸಾಯನಶಾಸ್ತ್ರ, ಭೌತಶಾಸ್ತ್ರ, ಸೈಕಾಲಜಿ, ವನ್ಯಜೀವಿ ನಿರ್ವಹಣೆ.
ಸ್ನಾತಕೋತ್ತರ ಡಿಪ್ಲೊಮಾ ಪದವಿಗಳು: ಆರ್ಕಿಯಾಲಜಿ ಮತ್ತು ಮ್ಯೂಸಿಯಾಲಜಿ, ಬಯೋ ಅನಲಿಟಿಕಲ್ ನ್ಯಾನೊ ಮೆಟಿರಿಯಲ್, ಬಯೋ ಅನಲಿಟಿಕಲ್ ಟೆಕ್ನಿಕ್ಸ್, ಕಂಪ್ಯಾರೇಟೀವ್ ಸ್ಟಡಿ ಆಫ್ ಕಲ್ಚರ್, ಇಂಡಸ್ಟ್ರಿಯಲ್ ಕೆಮಿಕಲ್ ಕ್ವಾಲಿಟಿ ಕಂಟ್ರೋಲ್, ಇಂಡಸ್ಟ್ರಿಯಲ್ ಬಯೋ ಅನಾಲಿಟಿಕಲ್ ಟೆಕ್ನಿಕ್ಸ್, ಮೆಡಿಷಿನಲ್ ಪ್ಲಾಂಟ್, ಯೋಗ.

ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು

ಕಡೂರು
ಕಲಾ ವಿಭಾಗ: ಅರ್ಥಶಾಸ್ತ್ರ.
ವಾಣಿಜ್ಯ ವಿಭಾಗ: ವಾಣಿಜ್ಯಶಾಸ್ತ್ರ.
ವಿಜ್ಞಾನ ವಿಭಾಗ: ಔಷಧೀಯ ರಸಾಯನಶಾಸ್ತ್ರ, ರಸಾಯನಶಾಸ್ತ್ರ.
ಸಹ್ಯಾದ್ರಿ ಕಲಾ ಕಾಲೇಜು ಕ್ಯಾಂಪಸ್, ಶಿವಮೊಗ್ಗ
ಕಲಾ ವಿಭಾಗ: ಸಂಸ್ಕೃತ, ಉರ್ದು.
ವಿಜ್ಞಾನ ವಿಭಾಗ: ಕ್ಲಿನಿಕಲ್ ಸೈಕಾಲಜಿ
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ
ಕಲಾ ವಿಭಾಗ: ಇಂಗ್ಲಿಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ.
ವಾಣಿಜ್ಯ ವಿಭಾಗ: ಎಂ.ಕಾಂ (ವಾಣಿಜ್ಯ ಶಾಸ್ತ್ರ), ಎಂಬಿಎ (ಮಾಸ್ಟರ್ ಆಫ್
ಬಿಸಿನೆಸ್ ಅಡ್ಮಿನಿಸ್ಟ್ರೇಷನ್).
ಸಹ್ಯಾದ್ರಿ ವಿಜ್ಞಾನ ಕಾಲೇಜು ಸ್ವಾಯತ್ತ, ಶಿವಮೊಗ್ಗ
ವಿಜ್ಞಾನ ವಿಭಾಗ: ಜೈವಿಕ ತಂತ್ರಜ್ಞಾನ, ಔದ್ಯೋಗಿಕ ರಸಾಯನಶಾಸ್ತ್ರ,
ರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವಶಾಸ್ತ್ರ.
ಈ ಎಲ್ಲಾ ಸ್ನಾತಕೋತ್ತರ ಅಧ್ಯಯನ ಪದವಿಗಳು ಸಿಬಿಸಿಎಸ್ ಸ್ಕೀಂಗೆ
ಒಳಪಟ್ಟಿರುತ್ತವೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.