ADVERTISEMENT

ಹಲಾಲ್‌ ವಿವಾದ: ಬಜರಂಗ ದಳದ 7 ಸದಸ್ಯರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 18:40 IST
Last Updated 1 ಏಪ್ರಿಲ್ 2022, 18:40 IST
   

ಭದ್ರಾವತಿ: ಹಲಾಲ್ ಮಾಂಸ ಖರೀದಿಸದಂತೆ ಮುಸ್ಲಿಮರ ಅಂಗಡಿಗಳ ಮುಂದೆ ಅಪಪ್ರಚಾರ ನಡೆಸಿದ್ದಲ್ಲದೇ, ಹಲ್ಲೆ ನಡೆಸಿದ ಆರೋಪದಡಿ ಭದ್ರಾವತಿ ಹಳೇ ನಗರ ಪೊಲೀಸರು ಬಜರಂಗದಳದ 7 ಕಾರ್ಯಕರ್ತರನ್ನು ಬಂಧಿಸಿ, ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಬಿ.ಎಚ್ ರಸ್ತೆಯ ಖಾಸಗಿ ಹೋಟೆಲ್ ಬಳಿ, ‘ಹಲಾಲ್ ಹೆಸರಿನಲ್ಲಿ ನಡೆಯುವ ಆಹಾರ ಸೇವಿಸಬೇಡಿ‘ ಎಂದು ಬುಧವಾರ ಪ್ರಚಾರ ನಡೆಸಿದ್ದರು. ‘ಬಜರಂಗದಳದ ಕಾರ್ಯ
ಕರ್ತರಾದ ವಡಿವೇಲು, ಸವಾಯ್, ವೆಂಕಟೇಶ, ಗುಂಡಪ್ಪ, ಶ್ರೀಕಾಂತ್‌, ಸಂಜು, ಮಂಜು, ಲೋಕೇಶ್‌ ಅವರ ವಿರುದ್ಧ ಮುಸಲ್ಮಾನರ ಅಂಗಡಿ ಮುಂದೆ ಗಲಾಟೆ ಮಾಡಿದ್ದರು. ಹಲ್ಲೆ ನಡೆದಿಲ್ಲ. ಎಲ್ಲರನ್ನೂ ಬಂಧಿಸಿ, ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT