ADVERTISEMENT

ಬೆರಳ ತುದಿಯಲ್ಲಿ ಕೋಲು ನಿಲ್ಲಿಸಿ ದಾಖಲೆ ನಿರ್ಮಿಸಿದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 3:13 IST
Last Updated 3 ಜುಲೈ 2021, 3:13 IST
ಬೆರಳ ತುದಿಯಲ್ಲಿ ಕೋಲು ಹಿಡಿದಿರುವ ಸ್ಟ್ಯಾನಿ ಲೋಪಿಸ್
ಬೆರಳ ತುದಿಯಲ್ಲಿ ಕೋಲು ಹಿಡಿದಿರುವ ಸ್ಟ್ಯಾನಿ ಲೋಪಿಸ್   

ಕಾರ್ಗಲ್:2 ಇಂಚು ಅಗಲ ಮತ್ತು 50 ಇಂಚು ಉದ್ದದ ಕೋಲನ್ನು 10 ನಿಮಿಷ ಬೆರಳಿನ ತುದಿಯಲ್ಲಿ ನಿಲ್ಲಿಸಿಕೊಂಡು ದಾಖಲೆಯನ್ನು ನಿರ್ಮಿಸುವ ಮೂಲಕ ಕಾರ್ಗಲ್ ನಿವಾಸಿ ಶಿಕ್ಷಕ ಸ್ಟ್ಯಾನಿ ಲೋಪಿಸ್ ಅವರು ‘ಕರ್ನಾಟಕ ಅಚೀವರ್ಸ್ ಬುಕ್ ಆಫ್‌ ರೆಕಾರ್ಡ್ಸ್‌’ಗೆ ಸೇರ್ಪಡೆಯಾಗಿದ್ದಾರೆ.

ಒಂದು ಬೆರಳಿನ ಮೇಲೆ 1 ನಿಮಿಷ ಸಮತೋಲನ ಕಾಯ್ದುಕೊಂಡು ನಂತರ ಆ ಬೆರಳಿನಿಂದ ಪಕ್ಕದ ಬೆರಳಿಗೆ ಕೋಲನ್ನು ವರ್ಗಾವಣೆ ಮಾಡಿ ಹತ್ತು ಬೆರಳುಗಳಲ್ಲಿಯೂ ಯಾವುದೇ ಸಹಾಯವಿಲ್ಲದೇ 10 ನಿಮಿಷಗಳ ಕಾಲ ನಿಲ್ಲಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ.

‘ಕರ್ನಾಟಕ ಅಚೀವರ್ಸ್ ಬುಕ್ ಆಫ್‌ ರೆಕಾರ್ಡ್ಸ್‌’ ಆಯ್ಕೆಯಾಗಿರುವುದಕ್ಕೆ ಶರಾವತಿ ಕಣಿವೆ ಯೋಜನಾ ಪ್ರದೇಶದ ವಿವಿಧ ಸಂಘ–ಸಂಸ್ಥೆಗಳು ಸ್ಟ್ಯಾನಿ ಲೋಪಿಸ್ ಅವರನ್ನು ಅಭಿನಂದಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.