ADVERTISEMENT

ಆನೆಗಳ ಆವಾಸಸ್ಥಾನ ಸಂರಕ್ಷಣೆ ಆಗಲಿ’

ವಿಶ್ವ ಆನೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಆರ್.ಸಿ.ಜಗದೀಶ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:26 IST
Last Updated 13 ಆಗಸ್ಟ್ 2024, 14:26 IST
ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳಿಂದ ವಿಶ್ವ ಆನೆಗಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕುಲಪತಿ ಆರ್.ಸಿ ಜಗದೀಶ್ ಇದ್ದರು.
ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳಿಂದ ವಿಶ್ವ ಆನೆಗಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕುಲಪತಿ ಆರ್.ಸಿ ಜಗದೀಶ್ ಇದ್ದರು.   

ಆನಂದಪುರ: ‘ಆನೆಗಳನ್ನು ರಕ್ಷಣೆ ಮಾಡಬೇಕಾದರೆ ಅವುಗಳ ಆವಾಸಸ್ಥಾನವನ್ನು ಸಂರಕ್ಷಣೆ ಮಾಡಬೇಕು’ ಎಂದು ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್ ಹೇಳಿದರು.

ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಅರಣ್ಯ ವಿಜ್ಞಾನ ವಿದ್ಯಾರ್ಥಿಗಳಿಂದ ಮಂಗಳವಾರ ನಡೆದ ವಿಶ್ವ ಆನೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಪಂಚದಲ್ಲೇ ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿವೆ. ಜೊತೆಗೆ ಆನೆಗಳು ಹೆಚ್ಚು ಪರೋಪಕಾರಿ ಗುಣಗಳುಳ್ಳ ಜೀವಿಗಳೆಂದು ಗುರುತಿಸಲಾಗಿದೆ. ಅವು ಮಾನವರನ್ನೂ ಒಳಗೊಂಡಂತೆ ಒತ್ತಡದಲ್ಲಿರುವ ಇತರೆ ಪ್ರಾಣಿಗಳಿಗೂ ಸಹಾಯ ಮಾಡುವುದು ಅವುಗಳ ಪರೋಪಕಾರಿ ಗುಣವಾಗಿದೆ. ಜೀವವೈವಿಧ್ಯ ಸಂರಕ್ಷಣೆ ಪರಿಸರ ವ್ಯವಸ್ಥೆಯ ಒಟ್ಟಾರೆ ಸಂರಕ್ಷಣೆಗೆ ಕಾರಣವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಅರಣ್ಯ ವಿಜ್ಞಾನದ ವಿದ್ಯಾರ್ಥಿಗಳಾದ ನೀವು, ಆನೆಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಅರಣ್ಯಾಧಿಕಾರಿಗಳಾದ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಮಹತ್ವವನ್ನು ಸಾರಬೇಕು’ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಿದ ಆನೆಗಳ ಕುರಿತ ಕರಪತ್ರವನ್ನು ಕುಲಪತಿ ಆರ್.ಸಿ. ಜಗದೀಶ್ ಬಿಡುಗಡೆಗೊಳಿಸಿದರು.

ಕುಲಸಚಿವ ಶಶಿಧರ್, ಪ್ರಾಧ್ಯಾಪಕರಾದ ಮಹೇಶ್ವರಪ್ಪ, ಸಿದ್ದಪ್ಪ ಕನ್ನೂರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.