ADVERTISEMENT

ಮನೆ ಹಾನಿ ₹ 5 ಲಕ್ಷ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:22 IST
Last Updated 1 ಆಗಸ್ಟ್ 2024, 7:22 IST
ರತ್ನಾಕರ್ ಹೊನಗೋಡು
ರತ್ನಾಕರ್ ಹೊನಗೋಡು   

ಆನಂದಪುರ: ಅಬ್ಬರದ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಸರ್ಕಾರ ಶೀಘ್ರವೇ ಹಣ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಅದು ಕೇವಲ ಅಧಿಕಾರಿಗಳ ವರದಿಗೆ ಸಿಮಿತವಾಗಬಾರದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಆಗ್ರಹಿಸಿದರು.

ಆನಂದಪುರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾನಿಯಾದ ಮನೆಗಳಿಗೆ ಪಂಚಾಯಿತಿ ವತಿಯಿಂದ ನೀಡಲಾಗುತ್ತಿರುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ ಎಂದರು. ಮನೆ ಕಳೆದುಕೊಂಡವರಿಗೆ ಹಿಂದಿನ ಸರ್ಕಾರಗಳು ನೀಡಿದಂತೆಯೇ ₹5 ಲಕ್ಷ ನೀಡಬೇಕು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ₹5 ಲಕ್ಷ ಪರಿಹಾರ ನಿಗದಿಪಡಿಸಿದ್ದರು. ಆದರೆ ಪರಿಹಾರಧನ ಹೆಚ್ಚಿಸಬೇಕಾಗಿದ್ದ ಈಗಿನ ಸರ್ಕಾರ ಅದನ್ನು ₹5 ಲಕ್ಷದಿಂದ ₹1.20 ಲಕ್ಷಕ್ಕೆ ಇಳಿಸಿದೆ. ಇಷ್ಟು ಹಣದಿಂದ ಮನೆ ನಿರ್ಮಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರವಾಹದ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಸಾಗರ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಹಣ ತಂದಿದ್ದರು. ಆದರೆ ಈ ಬಾರಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ದಾಖಲಾತಿ ಇಲ್ಲದ ಮನೆಗಳಿಗೆ ಪರಿಹಾರ ಇಲ್ಲ ಎಂಬ ಸರ್ಕಾರದ ಧೋರಣೆ ಸರಿಯಲ್ಲ. ಕ್ಷೇತ್ರದಲ್ಲಿ ಹಲವರು 94ಸಿ ಅಡಿ ಅರ್ಜಿ ಹಾಕಿ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರ ದಾಖಲೆ ಇಲ್ಲದಿವರಿಗೂ ಪರಿಹಾರ ನೀಡಬೇಕು. ಒಂದು ತಿಂಗಳೊಳಗೆ ಮನೆ ಹಾನಿ ಸಂಗ್ರಸ್ತರಿಗೆ ₹5 ಲಕ್ಷ ಪರಿಹಾರ ನೀಡದಿದ್ದರೆ ಹೋರಾಟ  ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ADVERTISEMENT

ಆನಂದಪುರ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಭರ್ಮಪ್ಪ, ಜಿಲ್ಲಾ ಉಪಾಧ್ಯಕ್ಷ ರೇವಪ್ಪ ಹೊಸಕೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.