ADVERTISEMENT

‘ಸದೃಢ ಸಮಾಜ‌ ನಿರ್ಮಾಣಕ್ಕೆ ಈಶ್ವರೀಯ ವಿವಿ ಕೊಡುಗೆ ಅಪಾರ’: ಡಿ.ಎಸ್ ಶಂಕರ್ ಶೇಟ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:49 IST
Last Updated 3 ಜೂನ್ 2025, 13:49 IST
ಸೊರಬದ ಮಾರ್ಕೆಟ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ 26ನೇ ವಾರ್ಷಿಕೋತ್ಸವದಲ್ಲಿ ಹಲವರನ್ನು ಸನ್ಮಾನಿಸಲಾಯಿತು
ಸೊರಬದ ಮಾರ್ಕೆಟ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ 26ನೇ ವಾರ್ಷಿಕೋತ್ಸವದಲ್ಲಿ ಹಲವರನ್ನು ಸನ್ಮಾನಿಸಲಾಯಿತು   

ಸೊರಬ: ‘ಸ್ವಾಸ್ಥ್ಯ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೊಡುಗೆ ಅಪಾರ’ ಎಂದು ಕನ್ನಡ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಅಧ್ಯಕ್ಷ ಡಿ.ಎಸ್ ಶಂಕರ್ ಶೇಟ್ ತಿಳಿಸಿದರು.

ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ 26ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಆರೋಗ್ಯಕರ, ಪರಸ್ಪರ ಸಂಬಂಧ ನಿರ್ಮಿಸಲು ಸಾಮಾಜಿಕ ಸ್ವಾಸ್ಥ್ಯವನ್ನು ಸಾಧಿಸಲಾಗುತ್ತದೆ. ಸಕಾರಾತ್ಮಕ ಸಾಮಾಜಿಕ ಸಂಬಂಧಗಳು ಕಷ್ಟದ ಸಮಯದಲ್ಲಿ ನಮಗೆ ಸಾಂತ್ವನ ಮತ್ತು ಬೆಂಬಲವನ್ನು ಒದಗಿಸುತ್ತವೆ. ಇಂದು ಮಹಿಳೆಯರು ಅರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ADVERTISEMENT

‘ಇಲ್ಲಿನ ಸಂಚಾಲಕಿ ವೀಣಾ ಅಕ್ಕ ಅವರು ಸಮಾಜದ ಸುಧಾರಣೆ, ಜಾಗೃತಿ ಹಾಗೂ ವಿವಿಧ ಸಂದರ್ಭಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ’    ಎಂದರು.

ಶಿಕಾರಿಪುರ ಬ್ರಹ್ಮಕುಮಾರಿ ಸ್ನೇಹಕ್ಕ, ಸೊರಬ ವೀಣಕ್ಕ, ಮೌಂಟ್ ಅಬುವಿನ ಅಮರೇಶ್ ಕೀರೆಸೂರು ರೋಣ, ಯೋಗ ಶಿಕ್ಷಕಿ ರೇಖಾ ಶ್ರೀನಿವಾಸ್ ನಾವುಡ, ಡಾ.ಪೂರ್ವಿಕಾ, ನಿವೇದಿತಾ ಶಾಂತಗೌಡ ಮಾತನಾಡಿದರು.

ಹಿರಿಯ ಪತ್ರಕರ್ತ ಯು.ಎನ್ ಲಕ್ಷ್ಮೀಕಾಂತ್, ನಾಗರಾಜ್ ಗುತ್ತಿ, ಜ್ಯೋತಿ ಜನಾರ್ದನ್ ಸಾಗರ, ರೇಖಾ ಬಸವರಾಜ್, ಜಯಮಾಲಾ ಅಣ್ಣಾಜಿ ಗೌಡ, ಕೃಷ್ಣ ಮೂರ್ತಿ ಗುಡಿಗಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.