ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಟೆಕ್ವಾಂಡೋ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆ ಬಾಪೂಜಿ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಯಿತು.
ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು 14 ಪದಕ ಗಳಿಸುವ ಮೂಲಕ ಬಾಪೂಜಿ ನಗರದ ಸರ್ಕಾರಿ ಪದವಿ ಕಾಲೇಜು ಪುರುಷ ಮತ್ತು ಮಹಿಳೆಯರ ಎರಡು ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆಯಿತು.
ಮಹಿಳೆಯರ 45 ಕೆ.ಜಿ ವಿಭಾಗದಲ್ಲಿ ಆರ್.ಸಂಜನಾ ಪ್ರಥಮ ಸ್ಥಾನ, 49 ಕೆ.ಜಿ ವಿಭಾಗದಲ್ಲಿ ಎಸ್.ಚೈತ್ರಾ ದ್ವಿತೀಯ ಸ್ಥಾನ, ಸಿ.ಡಿ.ಐಶ್ವರ್ಯಾ ತೃತೀಯ ಸ್ಥಾನ ಪಡೆದರು. 57 ಕೆ.ಜಿ ವಿಭಾಗದಲ್ಲಿ ವಸಂತ ವಲ್ಲೇಖರ್ ದ್ವಿತೀಯ ಸ್ಥಾನ, 62 ಕೆ.ಜಿ ವಿಭಾಗದಲ್ಲಿ ಎಸ್.ಜಿ.ನಿವೇದಿತಾ ದ್ವಿತೀಯ ಸ್ಥಾನ, ಎಚ್.ಸಿಂಧು ತೃತೀಯ ಸ್ಥಾನ, 67 ಕೆ.ಜಿ ವಿಭಾಗದಲ್ಲಿ ಸಿ.ವರ್ಷಿತಾ ಪ್ರಥಮ ಸ್ಥಾನ, ಎಚ್.ಆರ್. ಅನುಷಾ ದ್ವಿತೀಯ ಸ್ಥಾನ, 73 ಕೆ.ಜಿ ವಿಭಾಗದಲ್ಲಿ ಎಚ್.ಎಸ್.ಸದಕೃತಿ ಪ್ರಥಮ ಸ್ಥಾನ ಹಾಗೂ ಜಿ.ಎನ್.ಅನನ್ಯ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಪುರುಷರ 58 ಕೆ.ಜಿ ವಿಭಾಗದಲ್ಲಿ ಬಿ.ಎಂ.ದರ್ಶನ್ ದ್ವಿತೀಯ ಸ್ಥಾನ, ಸಿ. ಆಕಾಶ್ ತೃತೀಯ ಸ್ಥಾನ, 63 ಕೆ.ಜಿ ವಿಭಾಗದಲ್ಲಿ ಎಂ.ಹೇಮಂತ್ ಪ್ರಥಮ ಸ್ಥಾನ ಹಾಗೂ ಕೆ.ಎನ್. ದೇವರಾಜ್ ತೃತೀಯ ಸ್ಥಾನ, 68 ಕೆ.ಜಿ ವಿಭಾಗದಲ್ಲಿ ಟಿ. ನಂದೀಶ ಪ್ರಥಮ ಸ್ಥಾನ, ಬಿ.ವಿ.ಗಿರೀಶ್ ಗೌಡ ದ್ವಿತೀಯ ಸ್ಥಾನ, 74 ಕೆ.ಜಿ ವಿಭಾಗದಲ್ಲಿ ಕೆ. ಗುರುರಾಜ್ ಪ್ರಥಮ ಸ್ಥಾನ ಹಾಗೂ ಆರ್.ರುದ್ರೇಶ್ದ್ವಿ ತೀಯ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.