ADVERTISEMENT

ಭದ್ರಾ ನದಿಗೆ ರೈತರಿಂದ ಬಾಗೀನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 5:45 IST
Last Updated 1 ಸೆಪ್ಟೆಂಬರ್ 2025, 5:45 IST
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ನೇತೃತ್ವದಲ್ಲಿ ರೈತರು ಭದ್ರಾ ನದಿಗೆ ಬಾಗೀನ ಅರ್ಪಿಸಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ನೇತೃತ್ವದಲ್ಲಿ ರೈತರು ಭದ್ರಾ ನದಿಗೆ ಬಾಗೀನ ಅರ್ಪಿಸಿದರು   

ಭದ್ರಾವತಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರು ಭದ್ರಾ ನದಿಗೆ ಭಾನುವಾರ ಬಾಗೀನ ಅರ್ಪಿಸಿದರು. 

ನಂತರ ಮಾತನಾಡಿದ ಎಚ್‌.ಆರ್. ಬಸವರಾಜಪ್ಪ, ಉತ್ತಮ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಈ ವರ್ಷವೂ ಬೇಸಿಗೆ ಬೆಳೆ ಬೆಳೆಯಲು ರೈತರು ಆತಂಕ ಪಡುವ ಅಗತ್ಯವಿಲ್ಲ. ನೀರನ್ನು ಸದ್ಬಳಕೆ ಮಾಡಿಕೊಂಡು ಅಚ್ಚುಕಟ್ಟು ಭಾಗದ ಕೊನೆ ಭಾಗದ ರೈತರಿಗೂ ನೆರವಾಗಬೇಕು ಎಂದರು. 

ಭದ್ರಾ ಅಚ್ಚಕಟ್ಟು ವ್ಯಾಪ್ತಿಯ ನಾಲಾ, ಗೇಟುಗಳ ದುರಸ್ತಿ ಮಾಡದೇ ನೀರು ವ್ಯರ್ಥವಾಗಿ ಹರಿಯುತ್ತಿದೆ. ಈ ನೀರನ್ನು ತಡೆಯಲು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದರು. 

ADVERTISEMENT

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಹಿಟ್ಟೂರು ರಾಜು, ಪ್ರಮುಖರಾದ ಟಿ.ಎಂ ಚಂದ್ರಪ್ಪ, ಮುನಿಯಪ್ಪ, ಚಿಕ್ಕಬ್ಬಿಗೆರೆ ನಾಗರಾಜ್, ಭಾಗ್ಯಾ ರಾಘವೇಂದ್ರ, ಮರುಳಸಿದ್ದಯ್ಯ, ಮಲ್ಲಿಕಾರ್ಜುನ, ಕುಮಾರಯ್ಯ, ಪುಷ್ಪಾ, ಕೆ. ರಾಘವೇಂದ್ರ, ಹುಲಿಮಟ್ಟಿ ಜಯಣ್ಣ, ಪಿ.ಶೇಖರಪ್ಪ, ಎಂ.ಡಿ ನಾಗರಾಜ್,
ಜಿ.ಎನ್. ಪಂಚಾಕ್ಷರಿ, ಉಪಾಧ್ಯಕ್ಷ ಬಿ.ಆರ್.ಪಿ ಹಾಲಪ್ಪ, ರಾಜಶೇಖರ್, ಅಕ್ಕಿ ರಾಜು, ಮೂರ್ತಿ, ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.