ADVERTISEMENT

ಇಂದು ಶಿವಮೊಗ್ಗಕ್ಕೆ ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:50 IST
Last Updated 16 ಡಿಸೆಂಬರ್ 2019, 13:50 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಡಿ.17ರಂದುಶಿವಮೊಗ್ಗಕ್ಕೆ ಭೇಟಿ ನೀಡುವರು. ಅಂದು 8.30ಕ್ಕೆ ಪಕ್ಷದ ಕಚೇರಿಯಲ್ಲಿ ನಡೆಯುವ ಕೋರ್‌ಕಮಿಟಿ ಸಭೆ, 10.30ಕ್ಕೆ ಶುಭಮಂಗಳಕಲ್ಯಾಣ ಮಂದಿರದಲ್ಲಿ ನಡೆಯುವಸಮಾವೇಶದಲ್ಲಿ ಭಾಗವಹಿಸರು ಎಂದುವಿಧಾನ ಪರಿಷತ್ ಸದಸ್ಯಎಸ್‌.ರುದ್ರೇಗೌಡ ತಿಳಿಸಿದರು.

ಸಮಾವೇಶದಲ್ಲಿ ಮುಖಂಡರು, ಶಕ್ತಿ, ಮಂಡಲದ ಪ್ರಮುಖರು, ಸ್ಥಳೀಯ ಸಂಸ್ಥೆ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸುವರು ಸುಮಾರು ಒಂದೂವರೆ ಸಾವಿರ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುವರು.ನಂತರ ಮಂಡಲದ ಸಭೆ ನಡೆಯಲಿದೆ.ಸಂಜೆ ಮಂಗಳೂರಿನತ್ತ ಪಯಣ ಬೆಳೆಸುವರು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಳಿನ್ ಕುಮಾರ್ ಕಟೀಲ್‌ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಸಂಘಟನೆ, ಅಭಿವೃದ್ದಿ ಕೆಲಸಗಳು, ವಿಶೇಷವಾಗಿ ಶಿವಮೊಗ್ಗ ಅಭಿವೃದ್ದಿಗೆಕುರಿತು ಕಾರ್ಯಕರ್ತರ ಜತೆ ಮಾತನಾಡುವರು. ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವರು ಎಂದರು.

ADVERTISEMENT

ರಾಜ್ಯದಲ್ಲಿ ಬಿಜೆಪಿಸರ್ಕಾರಸುಭದ್ರವಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ನೆರವು, ಪರಿಹಾರ ನೀಡಲಾಗುತ್ತಿದೆ. ನೀರಾವರಿ, ವಿದ್ಯತ್, ರಸ್ತೆ, ಶಿಕ್ಷಣಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆಒತ್ತು ನೀಡಲಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶಿವಮೊಗ್ಗಜಿಲ್ಲೆಯ ಅಭಿವೃದ್ಧಿಯೂ ಚುರುಕುಗೊಂಡಿದೆ. ವಿಮಾನ ನಿಲ್ದಾಣ ಸ್ಥಾಪನೆ 6 ತಿಂಗಳಲ್ಲಿ ಸಾಕಾರಗೊಳ್ಳಲಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪಅವರು ಮುಖ್ಯಮಂತ್ರಿಯಾದ ಸಮಯದಲ್ಲಿಚಾಲನೆ ನೀಡಲಾಗಿತ್ತು. ₨ 40 ಕೋಟಿ ಹಣ ಬಿಡುಗಡೆಯಾಗಿತ್ತು. ಈಗ₨ 120 ಕೋಟಿ ಬಿಡುಗಡೆ ಮಾಡಲಾಗಿದೆ. ರೈಟ್ಸ್ ಕಂಪನಿಯವರಿಗೆ ತಾಂತ್ರಿಕ ವರದಿ ನೀಡಲು ಸೂಚಿಸಲಾಗಿದೆ.ವರದಿಬಂದ ತಕ್ಷಣ ಟೆಂಡರ್ ಪ್ರಕ್ರಿಯೆ ನಡೆಯಲಿದೆ.₨ 20 ಕೋಟಿ ವೆಚ್ಚದಲ್ಲಿಹಳೇಕಾರಾಗೃಹಆವರಣ ಅಭಿವೃದ್ಧಿ ಪಡಿಸಲಾಗುತ್ತಿದೆ.ಫ್ರೀಡಂ ಪಾರ್ಕ್‌ ಮಾದರಿಯಲ್ಲಿ ರೂಪಿಸಲಾಗುತ್ತಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರಾದಎಸ್.ಎನ್.ಚನ್ನಬಸಪ್ಪ, ಎನ್.ಜೆ.ರಾಜಶೇಖರ್, ಗಿರೀಶ್ ಪಟೇಲ್, ಶಂಕರ್, ಅನಿತಾ ರವಿಶಂಕರ್, ರುದ್ರೇಶ್, ರತ್ನಾಕರಶೆಣೈ, ಮಧುಸೂದನ್, ಕೆ.ವಿ.ಅಣ್ಣಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.