ADVERTISEMENT

ಶಿವಮೊಗ್ಗ: ಮಾಜಿ ಶಾಸಕ ಪ್ರಸನ್ನಕುಮಾರ್ ಹೇಳಿಕೆಗೆ ಬಿಜೆಪಿ ಆಕ್ರೋಶ

ವಾಜಪೇಯಿ ಬಡಾವಣೆ ನಿವೇಶನಗಳ ಹಂಚಿಕೆ ಹಗರಣ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 10:58 IST
Last Updated 8 ಜೂನ್ 2020, 10:58 IST
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್   

ಶಿವಮೊಗ್ಗ: ಲೋಕಾಯುಕ್ತ ತನಿಖೆ ನಡೆಯುತ್ತಿರುವವಾಜಪೇಯಿ ಬಡಾವಣೆನಿವೇಶನ ಹಂಚಿಕೆ ಹಗರಣವನ್ನು ರದ್ದು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ಹೇಳಿಕೆ ಬಾಲಿಶ. ಮಾಜಿ ಶಾಸಕರು ತಕ್ಷಣ ಇಂತಹ ಅಸಂಬದ್ಧ ಹೇಳಿಕೆ ಹಿಂಪಡೆಯಬೇಕು ಎಂದು ಬಿಜೆಪಿಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಆಗ್ರಹಿಸಿದರು.

ಅಸಂಬದ್ಧವಾಗಿ ಹೇಳಿಕೆ ನೀಡಿರುವ ಪ್ರಸನ್ನಕುಮಾರ್ ಈಶ್ವರಪ್ಪಅವರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸಾಮಾಜಿಕ ಜಾಲತಾಣಗಳಲ್ಲೂ ವಾಜಪೇಯಿ ಬಡಾವಣೆ ತನಿಖೆ ಹಾದಿ ತಪ್ಪಿಸುವ ಯತ್ನ ನಡೆಯುತ್ತಿದೆ. ಹಿಂದೆ ಅವರೇ ಈ ತನಿಖೆ ವಿಷಯ ತಿರುಚಲು ಮುಖ್ಯಮಂತ್ರಿಗಳಿಂದಲೂ ಸಾಧ್ಯವಿಲ್ಲ ಎಂದಿದ್ದರು. ಈಗ ಸಚಿವರಿಂದ ಹೇಗೆ ಸಾಧ್ಯ?ತನಿಖಾ ವರದಿಯಲ್ಲಿನ ಅಂಶಗಳು ಇವರಿಗೆ ಗೊತ್ತಿವೆ ಎಂದಾದರೆ ವರದಿಯ ಅಂಶಗಳು ಸೋರಿಕೆ ಆಗಿವೆಎಂದರ್ಥ.ಅಲ್ಲದೆ ಹಿಂದಿನ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಅವಧಿಯಲ್ಲಿ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ನಗರದಲ್ಲಿ ನಿರ್ಮಾಣವಾಗುತ್ತಿರುವಆಚಾರ್ಯತ್ರರ ಭವನಕ್ಕೆ ಈಶ್ವರಪ್ಪ ಅಡ್ಡಗಾಲು ಹಾಕುತ್ತಿದ್ದಾರೆ ಎಂದೂಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಈಶ್ವರಪ್ಪ ಅವರು ಎಂದಿಗೂ ಆ ರೀತಿ ಮಾಡುವವರಲ್ಲ, ಅವರೇ ಈ ಭವನ ನಿರ್ಮಾಣಕ್ಕೆ ₨50 ಲಕ್ಷ ಕೊಟ್ಟಿದ್ದಾರೆ.ಅವರವಿರುದ್ಧ ಅನವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ. ಮಾಜಿ ಶಾಸಕರು ಇಂತಹ ಕೀಳುಮಟ್ಟದ ರಾಜಕೀಯ ನಿಲ್ಲಿಸಬೇಕು. ಆಧಾರ ರಹಿತವಾದ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದರು.

ಪ್ರಧಾನಿ ಮೋದಿಅವರ ಒಂದು ವರ್ಷದ ಸಾಧನೆ ಪ್ರಚಾರ ಅಭಿಯಾನದ ಕತೆಗೆ ಜೂನ್‌ 10ರಂದು ವಿದೇಶಿ ವಸ್ತುಗಳ ಖರೀದಿ ಮತ್ತು ಬಳಕೆ ವಿರೋಧಿ ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲಾಗುವುದು.14ರಂದುಸಂಜೆ 4ಕ್ಕೆವಿದೇಶಿ ವಸ್ತುಗಳ ಬಳಕೆ ವಿರೋಧಿ ಅಭಿಯಾನದ ಮುಕ್ತಾಯ ಸಮಾರಂಭ ಎಲ್ಲೆಡೆ ನಡೆಯುವುದು ಎಂದುಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿಮುಖಂಡರಾದಬಿ.ಆರ್‌.ಮಧುಸೂದನ್, ರಮೇಶ್, ಶಿವರಾಜ್, ಎನ್.ಡಿ.ಸತೀಶ್, ಕೆ.ವಿ.ಅಣ್ಣಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.