ಶಿವಮೊಗ್ಗ: ‘ಬಿಪಿಎಲ್ ಕಾರ್ಡ್ ಹೊಂದಲು ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸಲಾಗವುದು. ಆದರೆ, ಶ್ರೀಮಂತರು ಕಾರ್ಡ್ ಪಡೆದಿದ್ದರೆ ಸ್ವಇಚ್ಛೆಯಿಂದ ಮರಳಿಸಬೇಕು. ಹಿಂದಿರುಗಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೇ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಹೇಳಿದರು.
ಸೋಗಾನೆ ವಿಮಾನನಿಲ್ದಾಣ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಸೌಲಭ್ಯ ಬಡವರಿಗೇ ಸಿಗಬೇಕು. ಶ್ರೀಮಂತರು ಇದನ್ನು ಪಡೆಯದಂತೆ ಕಡಿವಾಣ ಹಾಕಬೇಕು’ ಎಂದರು.
ಎಚ್ಚರಿಕೆ ಹೆಜ್ಜೆ: ಯಾರಿಗೂ ತೊಂದರೆಯಾಗದಂತೆ ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಸಂಪುಟ ಸಭೆಯಲ್ಲಿ ಚರ್ಚಿಸಿ, ಎಚ್ಚರಿಕೆಯ ಹೆಜ್ಜೆ ಇಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.