ADVERTISEMENT

ಕಾರ್ಗಲ್: ಕಾರು, ಜೀಪ್ ಡಿಕ್ಕಿ: ಏಳು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:33 IST
Last Updated 15 ಏಪ್ರಿಲ್ 2022, 4:33 IST

ಕಾರ್ಗಲ್: ಸಮೀಪದ ಲಿಂಗನಮಕ್ಕಿ ತಿರುವಿನಲ್ಲಿ ಗುರುವಾರ ಕೆಪಿಸಿ ಗುತ್ತಿಗೆ ಕಾರ್ಮಿಕರ ಜೀಪ್ ಮತ್ತು ಉಪ್ಪುಂದ ಮೂಲದ ಸ್ವಿಪ್ಟ್ ಕಾರು ಮುಖಾಮುಖಿ ಡಿಕ್ಕಿಯಾಗಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಪ್ರವಾಸಿ ವಾಹನಗಳಲ್ಲಿ ಕಾರ್ಗಲ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. 108 ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಗಾಯಾಳುಗಳು ತೊಂದರೆ ಪಡುವಂತಾಯಿತು. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT