ADVERTISEMENT

ಚರಕ ಸಂಸ್ಥೆ; ₹ 8.15 ಕೋಟಿ ವಹಿವಾಟು: ಕಾರ್ಯದರ್ಶಿ ರಮೇಶ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:01 IST
Last Updated 26 ಸೆಪ್ಟೆಂಬರ್ 2025, 6:01 IST
ಸಾಗರಕ್ಕೆ ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಬುಧವಾರ ಚರಕ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ನಡೆಯಿತು
ಸಾಗರಕ್ಕೆ ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಬುಧವಾರ ಚರಕ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ನಡೆಯಿತು   

ಸಾಗರ: ‘ಕೈಮಗ್ಗ ನೇಕಾರಿಕೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಚರಕ ಸಂಸ್ಥೆಯು 2024-25ನೇ ಸಾಲಿನಲ್ಲಿ ₹ 8.15 ಕೋಟಿ ವಹಿವಾಟು ನಡೆಸಿದೆ’ ಎಂದು ಚರಕ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್ ಎನ್. ತಿಳಿಸಿದ್ದಾರೆ. 

ಸಮೀಪದ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಬುಧವಾರ ಚರಕ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಕಳೆದ ಸಾಲಿಗಿಂತ ₹40 ಲಕ್ಷದಷ್ಟು ಹೆಚ್ಚಿನ ವಹಿವಾಟು ನಡೆಸಲಾಗಿದೆ’ ಎಂದರು. 

‘ಲಾಭ ಗಳಿಕೆಗಿಂತ ಕೈಮಗ್ಗ ನೇಕಾರರ ಶ್ರೇಯೋಭಿವೃದ್ಧಿಗೆ ನಮ್ಮ ಸಂಸ್ಥೆ ಹೆಚ್ಚಿನ ಒತ್ತು ನೀಡುತ್ತಿದೆ. ನೇಕಾರರಿಗೆ ಸಂಬಳದ ಜೊತೆಗೆ ಬೋನಸ್, ಪಿಎಫ್, ಇಎಸ್ಐ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು. 

ADVERTISEMENT

ಸಂಸ್ಥೆಯ ಆಡಳಿತ ನಿರ್ವಹಣಾಧಿಕಾರಿ ಟೆರೆನ್ಸ್ ಪೀಟರ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಜಿ.ಕೃಷ್ಣ, ಪ್ರಮುಖರಾದ ಮಹಾಲಕ್ಷ್ಮಿ, ಪದ್ಮಶ್ರೀ, ಗಿರಿಜಾ, ಎಂ.ನಾಗರತ್ನ, ಕೆ.ಎಸ್.ಲಕ್ಷ್ಮಿನಾರಾಯಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.