ಭದ್ರಾವತಿ: ಹಳೇನಗರದ ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಗೋಪುರಗಳ ಮೇಲೆ ಎಲ್ಲೆಂದರಲ್ಲಿ ಯಥೇಚ್ಛವಾಗಿ ಬೆಳೆದು ಬೇರು ಬಿಟ್ಟಿದ್ದ ಅರಳಿ ಗಿಡಗಳನ್ನು ಭಾನುವಾರ ಪುರಾತತ್ವ ಇಲಾಖೆಯ ಸಿಬ್ಬಂದಿ ಕಿತ್ತು ಹಾಕಿದರು.
ಮುಜರಾಯಿ ಇಲಾಖೆಯವರು ಗಿಡಗಳನ್ನು ಕೀಳಿಸದೆ ದೇವಾಲಯದ ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಪುರಾತತ್ವ ಇಲಾಖೆಯ ಸಿಬ್ಬಂದಿ ಬಂದು ಗಿಡಗಳನ್ನು ಕಿತ್ತು ಹಾಕಿ ಸ್ವಚ್ಛಗೊಳಿಸಿದರು.
ಕೈಜೋಡಿಸಿದ ಸಾರ್ವಜನಿಕರು: ದೇವಾಲಯದ ಮೇಲೆ ಬೆಳೆದಿದ್ದ ಅರಳಿ ಗಿಡಗಳನ್ನು ಕೀಳುವ ಕಾರ್ಯದಲ್ಲಿ ಇಲಾಖೆಯ ಸಿಬ್ಬಂದಿ ರಾಂಪ್ರಕಾಶ್, ನಾರಾಯಣಪ್ಪ ಅವರೊಂದಿಗೆ ಸಾರ್ವಜನಿಕರು ಕೈಜೋಡಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರುತಿ, ಮಾಜಿ ಸದಸ್ಯ ವಿಶ್ವನಾಥ್, ಸ್ಥಳೀಯರಾದ ನರಸೇಗೌಡ, ಸುಬ್ರಹ್ಮಣ್ಯ , ವೈಶಾಖ್, ನಿಖಿಲ್, ಹರ್ಷ, ಪ್ರವೀಣ್ ಅವರು ಗಿಡಗಳನ್ನು ಕಿತ್ತು ಬೇರಿಗೆ ರಾಸಾಯನಿಕ ಔಷಧಿ ಸಿಂಪಡಿಸುವ ಕಾರ್ಯ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.