ADVERTISEMENT

ಕೊರೊನಾ: 18 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 3:12 IST
Last Updated 11 ಜನವರಿ 2021, 3:12 IST

ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ 18 ಮಂದಿ ಗುಣಮುಖರಾಗಿದ್ದು, 8 ಜನರಿಗೆ ಸೋಂಕು‌ ತಗುಲಿದೆ.

358 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಹಿಂದಿನ ದಿನಗಳ ಪರೀಕ್ಷಾ ವರದಿಯೂ ಸೇರಿ 1,751 ಮಂದಿಯ ವರದಿ ನೆಗೆಟಿವ್ ಬಂದಿದೆ.

ಮನೆಗಳಲ್ಲಿ 46 ಸೇರಿ ಒಟ್ಟು 90 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕೋವಿಡ್‌ನಿಂದ 349 ಜನರು ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲ್ಲೂಕಿನಲ್ಲಿ 3, ಶಿಕಾರಿಪುರದಲ್ಲಿ 2, ತೀರ್ಥಹಳ್ಳಿಯಲ್ಲಿ 1, ಹೊಸನಗರದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.