
ಪ್ರಜಾವಾಣಿ ವಾರ್ತೆಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ 44 ಮಂದಿಗೆ ಕೊರೊನಾ ದೃಢಪಟ್ಟಿದೆ. 13 ಜನರು ಗುಣಮುಖರಾಗಿದ್ದಾರೆ.
ಮನೆಯಲ್ಲಿ 128 ಮಂದಿ ಸೇರಿ ಒಟ್ಟು 270 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 2951 ಮಂದಿಯ ಗಂಟಲು ದ್ರವ
ಗಳನ್ನು ಪರೀಕ್ಷೆ ಮಾಡಲಾಗಿದೆ. ಹಿಂದಿನ ದಿನಗಳ ಪರೀಕ್ಷಾ ವರದಿಯೂ ಸೇರಿ 1684 ಮಂದಿಯ ವರದಿಗಳು ನೆಗೆಟಿವ್ ಬಂದಿವೆ. ಶಿವಮೊಗ್ಗ ತಾಲ್ಲೂಕಿನಲ್ಲಿ 24, ಭದ್ರಾವತಿಯಲ್ಲಿ 5, ಶಿಕಾರಿಪುರದಲ್ಲಿ 5, ತೀರ್ಥಹಳ್ಳಿಯಲ್ಲಿ 1, ಸೊರಬದಲ್ಲಿ 4, ಸಾಗರ 3, ಹೊಸನಗರ 1 ಹಾಗೂ ಇಲ್ಲಿಗೆ ಬಂದಿದ್ದ ಹೊರ ಜಿಲ್ಲೆಯ ಒಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.